108 ಆಂಬುಲೆನ್ಸ್ 2 ವಾಹನದಲ್ಲಿ- 3 ಹೆಣ್ಣು ಮಗುವಿನ ಜನ್ಮ

ಸಿರವಾರ.ನ.08- ತಾಲೂಕಿನ,ಗಣದಿನ್ನಿ ಗ್ರಾಮದ ಹನುಮಂತಿ ಗಂ ಆಂಜನೇಯ್ಯ ಹೆರಿಗೆ ನೋವಿನಿಂದ ಬಳಲುತ್ತಿದ್ದ ಆರೋಗ್ಯ ಕವಚಕ್ಕೆ ಕರೆ ಮಾಡಿದ್ದೂ ಗ್ರಾಮದಿಂದ ಮಹಿಳೆಯನ್ನು ಸಿರವಾರ ತಾಲೂಕು ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿಯೇ ಹೆರಿಗೆ ನೋವು ಹೆಚ್ಚಾದ ಹಿನ್ನಲ್ಲೆ 108 ವಾಹನದಲ್ಲಿಯೇ ಶುಶ್ರೂಷಕಿ ಲಕ್ಷ್ಮಿ ಅವರು ಮಾರ್ಗ ಮದ್ಯೆ ಆಂಬುಲೆನ್ಸ್ ನಲ್ಲೇ ಮಹಿಳೆಗೆ ಸುರಕ್ಷತಾ ಹೆರಿಗೆ ಮಾಡಿಸಿದ್ದೂ ಅವಳಿ ಹೆಣ್ಣು ಮಗು ಜನಿಸಿದೆ ಘಟನೆ ಶನಿವಾರ ರಾತ್ರಿ ಜರುಗಿದ್ದು, ನಂತರ ತಾಯಿ ಅವಳಿ ಮಗುವನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ 108 ವಾಹನದ ಸಿಬ್ಬಂದಿಗಳಿಗೆ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ ಆಶಾ ಕಾರ್ಯಕರ್ತೆ ಚಾಲಕ ಶಶಿಕಾಂತು ಇದ್ದರು.
ಅದೇ ರೀತಿ ದೇವದುರ್ಗ ತಾಲೂಕಿನ ಬೆಂಚಿಮರಡಿ ತಾಂಡ ದ ಅಂಬಾರಿ ಭಾಯಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ತಾಯಿ ಮಗುವನ್ನು ದೇವದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ 108 ವಾಹನದ ಸಿಬ್ಬಂದಿಗಳಿಗೆ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಶುಶ್ರೂಷಕ ಭೀಮಪ್ಪ ಚಾಲಕ ಮಹಾಲಿಂಗಪ್ಪ ಅಭಿನಂದನೆ ತಿಳಿಸಿದ್ದಾರೆ. ಅಗಾಗ ಇಂತಹ ಘಟನೆಗಳು ಜರುಗುತ್ತೀದ್ದೂ, ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ ಗರ್ಭಿಣಿಯರಿಗೆ ವೈದ್ಯರ ಸಲಹೆ ಸೂಚನೆಬೇಕಾಗಿದೆ.