
ಹರಿಹರ. ಆ .8; ಆಸ್ಪತ್ರೆ ಮುಂದೆ ನಿಂತಿರುವ 108 ಅಂಬ್ಯುಲೆನ್ಸ್ ಕಳೆದೊಂದು 22 ದಿನದಿಂದ ಕೆಟ್ಟು ನಿಂತಿದೆ. ಹೆರಿಗೆ ನೋವು ಕಾಣಿಸಿಕೊಂಡ ತುರ್ತು ಸಂದರ್ಭಗಳಲ್ಲಿ ಮಹಿಳೆಯರು 108ಗೆ ಕರೆ ಮಾಡಿದರೆ ಅಂಬ್ಯುಲೆನ್ಸ್ ಸಿಗುತ್ತಿಲ್ಲ ಎಂದು ಆಸ್ಪತ್ರೆಗೆ ಬಂದಂತ ಸಾರ್ವಜನಿಕರು ದೂರಿದರು.ಕಷ್ಟಕಾಲದಲ್ಲಿ ರೋಗಿಗಳಿಗೆ ನೆರವಿಗೆ ನಿಲ್ಲಬೇಕಾದ 108 ಅಂಬುಲೆನ್ಸ್ ತುರ್ತು ವಾಹನ ಸಹಾಯ ಮಾಡುವುದಕ್ಕಿಂತಲೂ ಕಷ್ಟ ಕೊಡೋದೇ ಹೆಚ್ಚು ಎಂಬಂತಾಗಿದೆ ಕಳೆದ 22 ದಿನಗಳಿಂದ ಆಸ್ಪತ್ರೆಯ ಆವಣದಲ್ಲಿ 108 ಆಂಬುಲೆನ್ಸ್ ಕೆಟ್ಟ ನಿಂತಿದ್ದರು ಸಂಬಂಧಿಸಿದ ಆಸ್ಪತ್ರೆಯ ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ಅಥವಾ ಅಂಬುಲೆನ್ಸ್ ನಿರ್ವಹಣೆ ಮಾಡುವ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಸರ್ಕಾರ ಒದಗಿಸಿರುವ ಆಂಬುಲೆನ್ಸ್ ಸೂಕ್ತ ನಿರ್ವಹಣೆ ಇಲ್ಲದೆ ನಿಂತಲ್ಲೇ ನಿಂತು ಹಾಳಾಗಿ ಹೋಗುತ್ತಿದೆ ಸಾರ್ವಜನಿಕರು ಮಾತ್ರ ಪರದಾಡುತ್ತಿದ್ದಾರೆ ರೋಗಿಗಳ ಅನುಕೂಲಕ್ಕಾಗಿ ಸರ್ಕಾರ ರಾಜ್ಯಾದ್ಯಂತ 108 ಆಂಬುಲೆನ್ಸ್ ಸೇವೆ ಕಲ್ಪಿಸಿದೆ. ಹರಿಹರ ತಾಲೂಕಿಗೆ ಜೀವ ರಕ್ಷಕ ವಾಹನ ಇದ್ದೂ ಈ ಭಾಗದ ರೋಗಿಗಳಿಗೆ ಅದರ ಸೌಲಭ್ಯ ಸಿಗದಂತಾಗಿರುವುದು ವಿಷಾದನೀಯ.ಕಳೆದ 22 ದಿನಗಳಿಂದ 108 ಅಂಬುಲೆನ್ಸ್ ವಾಹನದ ಬ್ಯಾಟರಿಯು ದುರಸ್ತಿ ಕಾರ್ಯಕ್ಕೆ ಬಂದಿದ್ದರು ಏಜೆನ್ಸಿಯವರಾಗಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹರಿಹರ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಆರೋಗ್ಯ ಇಲಾಖೆಯಾಗಲಿ ಗಮನ ವಹಿಸದೆ ನಿರ್ಲಕ್ಷ್ಯ ವಹಿಸಿರುವುದರಿಂದ ಆಂಬುಲೆನ್ಸ್ ಅನ್ನು ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಲಾಗಿದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಈ ಭಾಗದ ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಹರಿಹರ ತಾಲೂಕಿನ ನಾಗರಿಕರು ಸಂಘ ಸಂಸ್ಥೆ ಅವರು ಒತ್ತಾಯಿಸಿದ್ದಾರೆ.