108 ಅರ್ಚಕರು, ಪುರೋಹಿತರಿಗೆ ಸನ್ಮಾನ

ಹುಬ್ಬಳ್ಳಿ,ಸೆ9: ರಜತ ಉಳ್ಳಾಗಡ್ಡಿಮಠ ಫೌಂಡೇಶನ್ ವತಿಯಿಂದ ದಿ. ವಿಶ್ವಪ್ರಕಾಶ್ ಉಳ್ಳಾಗಡ್ಡಿಮಠ ಅವರ ಸ್ಮರಣಾರ್ಥ ಹುಬ್ಬಳ್ಳಿಯ ಮೂರುಸಾವಿರಮಠದ ಆವರಣದಲ್ಲಿ 108 ಅರ್ಚಕರು, ಪುರೋಹಿತರಿಗೆ ಸನ್ಮಾನಿಸಲಾಯಿತು.
ಫೌಂಡೇಶನ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಮೂರುಸಾವಿರಮಠದ ಡಾ.ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೇರವೇರಿದ ಸನ್ಮಾನ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯ ಪುರೋಹಿತ, ಅರ್ಚಕರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ನಂತರ ಮಾತನಾಡಿದ ಮೂರುಸಾವಿರಮಠದ ಶ್ರೀಗಳು, ರಜತ್ ಉಳ್ಳಾಗಡ್ಡಿಮಠ ಫೌಂಡೇಶನ್ ಕಳೆದ ಒಂದೂವರೆ ವರ್ಷಗಳಿಂದ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಅದರಂತೆ ಇದೀಗ ಧಾರ್ಮಿಕ ವಿಧಿವಿಧಾನ ಮಾಡುವ ವೈದಿಕರನ್ನು ಗೌರವಿಸಿದ್ದಾರೆ. ವೈದಿಕರು ಆರ್ಥಿಕವಾಗಿ ಅಷ್ಟು ಸಬಲರಾಗಿಲ್ಲ. ಅಂತವರನ್ನು ಪೆÇ್ರೀತ್ಸಾಹಿಸುತ್ತಿರುವುದು ಖುಷಿಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ಚಾರ್ಟೆಡ್ ಅಕೌಂಟೆಂಟ್ ಎನ್.ಎ.ಚರಂತಿಮಠ, ನಿವೃತ್ತ ಎಕ್ಸಿಸ್ ಅಧಿಕಾರಿ ಎಂ.ಎ.ಹಿರೇಮಠ, ಎನ್ ಕೆಎಸ್ ಎಸ್ ಐ ಅಧ್ಯಕ್ಷ ಜೆ.ಸಿ.ಮಠದ್, ಪ್ರಗತಿಪರ ರೈತ ಬಸಯ್ಯ ಹಿರೇಮಠ, ಗುತ್ತಿಗೆದಾರ ಎನ್.ಬಿ.ಹಿರೇಮಠ, ಪ್ರಕಾಶ ಕ್ಯಾರಕಟ್ಟಿ, ಅಶೋಕ ಕಲಾದಗಿ, ಪ್ರಕಾಶ ಮಾಯಕಾರ, ಬಾಲಮ್ಮ ಜಂಗಿನವರ ಸೇರಿದಂತೆ ಮುಂತಾದವರು ಇದ್ದರು.