104 ವಾಹನಗಳ ಜಪ್ತಿ

ಕಲಬುರಗಿ.ಮೇ.17:ಕೋವಿಡ್ ಕಫ್ರ್ಯೂ ಉಲ್ಲಂಘನೆಯ ವಿರುದ್ಧ ಪೋಲಿಸರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಅನಗತ್ಯವಾಗಿ ಸಂಚರಿಸಿದ ಸುಮಾರು 70 ದ್ವಿಚಕ್ರವಾಹನಗಳು, 19 ತ್ರಿಚಕ್ರವಾಹನಗಳು ಹಾಗೂ 15 ನಾಲ್ಕು ಚಕ್ರಗಳ ವಾಹನಗಳೂ ಸೇರಿ ಒಟ್ಟು 104 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಕಿಶೋರ ಬಾಬು ತಿಳಿಸಿದ್ದಾರೆ.
ಮಾಸ್ಕ್ ಹಾಕದ ಸುಮಾರು 448 ಜನರ ವಿರುದ್ಧ ಪ್ರಕರಣ ದಾಖಲಿಸಿ, 90,850ರೂ.ಗಳ ದಂಡ ವಸೂಲಿ ಮಾಡಲಾಗಿದೆ. ಕರ್ನಾಟಕ ಎಪಿಡೇಮಿಕ್ ಡೀಸಿಸ್ ಆಕ್ಟ್ 2020 ಆದೇಶ ಉಲ್ಲಂಘಿಸಿದ 9 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.