102 ದಂಪತಿಗಳಿಗೆ ಪಾದಪೂಜೆ ಕಾರ್ಯಕ್ರಮ

ಹಿರಿಯೂರು.ಏ.29- ಹಿರಿಯೂರಿನ ವಾಸವಿ ಯುವಜನ ಸಂಘದ ವತಿಯಿಂದ ಆರ್ಯವೈಶ್ಯ ಮಂಡಳಿ ಹಾಗೂ ವಾಸವಿ ಯುವತಿಯರ ಸಂಘ ವಾಸವಿ ಕ್ಲಬ್ ಸಹಕಾರದೊಂದಿಗೆ ವಾಸವಿ ಜಯಂತಿಯ ಹಿನ್ನೆಲೆಯಲ್ಲಿ ಆರ್ಯವೈಶ್ಯ ಸಮಾಜದ 60 ವರ್ಷ ಮೇಲ್ಪಟ್ಟ  102 ಜನ ದಂಪತಿಗಳಿಗೆ ನಗರದ ಕನಿಕ ಮಹಲ್ ನಲ್ಲಿ ಪಾದಪೂಜೆ ಮಾಡಿ  ನೆನಪಿನ ಕಾಣಿಕೆ ನೀಡಿದರು ಈ ಸಂದರ್ಭದಲ್ಲಿ ಮಾತನಾಡಿದ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ಎಚ್ಎಸ್ ನಾಗರಾಜ ಗುಪ್ತ ರವರು ಇದೊಂದು ತುಂಬಾ ವಿಶೇಷವಾದಂತಹ ಕಾರ್ಯಕ್ರಮ ವಾಸವಿ ಮಾತೆಯು ಎಲ್ಲರಿಗೂ ಸುಖ ಶಾಂತಿ ಸಮೃದ್ಧಿಯನ್ನು ನೀಡಲಿ ಎಂದು ಕೋರಿದರು.ವಾಸವಿ ಯುವಜನ ಸಂಘದ ಅಧ್ಯಕ್ಷರಾದ ವಿ. ಜಗದೀಶ್, ಉಪಾಧ್ಯಕ್ಷರಾದ  ಎಸ್.ರಂಗನಾಥ್ ,ಕಾರ್ಯದರ್ಶಿ ಎನ್ ರಾಜೇಶ್,ಸಹ ಕಾರ್ಯದರ್ಶಿ ಎಂಆಂಜನೇಯ, ಖಜಾಂಚಿ ಡಿ.ಆರ್.ಸಂದೀಪ್ ನಿರ್ದೇಶಕರಾದ ಪುನೀತ್, ಪ್ರತಾಪ್, ಅರವಿಂದ್, ಮನೋಹರ್, ದೀಪಕ್ ಹಾಗೂ  60 ವರ್ಷ ಮೇಲ್ಪಟ್ಟ 102 ಜನ ದಂಪತಿಗಳು  ಮತ್ತು ಆರ್ಯವೈಶ್ಯ ಸಮಾಜದ ಅನೇಕ ಗಣ್ಯರು ಯುವ ಮುಖಂಡರು ಉಪಸ್ಥಿತರಿದ್ದರು