101 ಟೆಂಗಿನಕಾಯಿ ಒಡೆದು ಹರಕೆ ತೀರಿಸಿದ ಅಭಿಮಾನಿ

ಗುರುಮಠಕಲ:ಮೇ.17: ಗುರುಮಠಕಲ ಮತಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಶರಣಗೌಡ ಕಂದಕೂರ ಅವರು ಗೆಲುವು ಸಾದಿಸಿದ ಹಿನ್ನೆಲೆಯಲ್ಲಿ ಗುರುಮಠಕಲ್ ತಾಲೂಕು ಚಂಡರಿಕಿ ಗ್ರಾಮದಲ್ಲಿ ಗೌಡರ ಅಭಿಮಾನಿಗಳು ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಇಲ್ಲಿನ ಗ್ರಾಮ ದೇವತೆ ಊರಡಮ್ಮ ತಾಯಿ ಅಮ್ಮ ನವರಿಗೆ ವಿಶೇಷ ಪೂಜೆ ಸಲ್ಲಿಸಿ 101 ಟೆಂಗಿನಕಾಯಿ ಒಡೆದು ಹರಕೆ ತೀರಿಸಿದರು.
ಈ ಸಂದರ್ಭದಲ್ಲಿ ಭೀಮರೆಡ್ಡಿ ಇಟ್ಲಪುರ. ಸುರೇಶ ಅವುಂಟಿ. ಮಲ್ಲಿಕಾರ್ಜುನ ಅನೂರ .ವಿಜಯ ಭಾಸ್ಕರ ರೆಡ್ಡಿ. .ರಾಮಮೂರ್ತಿ ಮಂತ. .ಪವನ ಕುಮಾರ. ರವಿ ಕಾಂಬಳೆ. ಗೋಪಾಲಗೌಡ ಕಲಾಲ. ಕಾಂತಪ್ಪ. ಲಕ್ಷ್ಮಣ ತಲಾರಿ. ಗೋವಿಂದ ಇತರರು ಇದ್ದರು.