1008ನೆಯ ವಾರದ ಸಹಸ್ರಕಂಠ ಸಾಮೂಹಿಕ ‘ವಿಷ್ಣು ಸಹಸ್ರನಾಮ ಸಾಕ್ಷಿಯಾದ ಸಹಸ್ರರು


ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ3:  ಹೊಸಪೇಟೆಯ ಶ್ರೀಕೃಷ್ಣಮಠದಲ್ಲಿ 1008ನೆಯ ವಾರದ ಸಹಸ್ರಕಂಡ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣದ ವಿಶೇಷ ಕಾರ್ಯಕ್ರಮ ಸಹಸ್ರರು ಸಾಕ್ಷಿಯಾದರು.
 ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ, ವಾಮನತೀರ್ಥ ಪರಂಪರೆಯ ಶ್ರೀ ಶೀರೂರು ಮಠದ ಜಗದ್ಗುರು ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು. ಭಾವೀ ಪರ್ಯಾಯ ಪೀಠದ ಪೂಜ್ಯರು ಪಾಲ್ಗೊಂಡು ಆರ್ಶಿವದಿಸಿದರು.
ಬೆಂಗಳೂರಿನ ಪ್ರವಚನ ಪಂಡಿತರಾದ ವಿದ್ವಾನ್  ಎಲ್.ಎಸ್. ಬ್ರಹ್ಮಣ್ಯತೀರ್ಥಾಚಾರರು ತಮ್ಮ ಪ್ರವಚನದಲ್ಲಿ ಸಹಸ್ರನಾಮ ಪಾರಾಯಣ ಭಗವಂತನ ಹತ್ತಿರವಾಗಲು ಸಹಾಯವಾಗಬಲ್ಲದು ಉತ್ತಮ ಸಂಸ್ಕಾರ ನಮ್ಮ ಒಳಿತುಕೆಡಕುಗಳನ್ನು ನಿರ್ಧರಿತವಾಗಲಿದೆ.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯದರ್ಶಿ ಯು.ರಾಘವೇಂದ್ರರಾವ್ ಮಾತನಾಡಿ
2004ರಲ್ಲಿ ಗಾಂಧಿವಾದಿ ಕೆ. ನಾರಾಯಣಭಟ್ಟ ಹಾಗೂ  ರಘುಪತಿ ಬೈಲೂರು ಇವರ ನೇತೃತ್ವದಲ್ಲಿ ಪುರೋಹಿತ ವಿದ್ವಾನ್  ಕೇಶವಾಚಾರ್ಯರ ಮನೆಯಲ್ಲಿ ಪ್ರಾರಂಭವಾದ ವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮಕ್ಕೆ ಇಂದು 20 ವರ್ಷ ಸಂದಿದೆ. ಅಂದು ಕೆಲವೇ ಸದಸ್ಯರಿಂದ ಪ್ರಾರಂಭಗೊಂಡ ಈ ಸಂಸ್ಥೆ ಇಂದು ಆಧ್ಯಾತ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಮೌನಕ್ರಾಂತಿಯಿಂದಾಗಿ ನಾಡಿನ ಉದ್ದಗಲಗಳಲ್ಲಿ ಪ್ರಸಿದ್ದಿ ಪಡೆದಿದೆ ಎಂದರು.
ಶ್ರೀ ವಿಷ್ಣು ಸೇವಾ  ಸಂಸ್ಥೆಯ ಅಧ್ಯಕ್ಷರಾದ ಯು.ನರಸಿಂಹಮೂರ್ತಿ ಅಧ್ಯಕ್ಷತೆಯಲ್ಲಿಆಯೋಜಿಸಲಾಗಿತು.
ಸಂಸ್ಥೆಯ ಶ್ರೀಪತಿ ಆಚಾರ್ಯ, ಆರ್.ಪಿ.ಗುರುರಾಜ್, ವಾದಿರಾಜ್, ನರಸಿಂಹ ಆಚಾರ್ಯ, ರಾಮಮೂರ್ತಿ ಆಚಾರ್ಯ ಅಶೋಕ ಜೀರೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.