100 ಶೈಕ್ಷಣಿಕ ಶಾಲೆಗಳು ತಂಬಾಕು ಮುಕ್ತ

ಇಂಡಿ: ಜು.18:ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ತಂಬಾಕು ಮುಕ್ತವನ್ನಾಗಿ ಮಾಡಲು ಭೇಟಿ ನೀಡಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.

ತಾಲೂಕಿನ ಮಾವಿನಹಳ್ಳಿ, ಪಡನೂರ, ಲಚ್ಯಾಣ ಶಾಲೆಗಳಿಗೆ ತಂಡದೊಂದಿಗೆ ಭೇಟಿ ನೀಡಿ ಮಾತನಾಡುತ್ತಿದ್ದರು.

ಶಾಲೆ ಸುತ್ತಲಿನ 100 ಮೀ ಪ್ರದೇಶದಲ್ಲಿ ಕಿರಾಣಾ ಅಂಗಡಿ ಮತ್ತು ಪಾನಶಾಪ್ ಗಳಲ್ಲಿ ಅನಧಿಕೃತವಾಗಿ ಮಾರಾಟ ಮಾಡುವವರ ಮೇಲೆ ಪೋಲಿಸರ ಸಹಕಾರದಿಂದ ಅನಿರೀಕ್ಷಿತ ದಾಳಿಗಳನ್ನು ನಡೆಸಲಾಗುವದು.

ಲೈಸನ್ಸ ಇಲ್ಲದಿರುವವರ ಮೇಲೆ ಕೂಟ್ಟಾ ಕಾಯ್ದೆ ಅಡಿ ಕ್ರಮ ಕೈಕೊಂಡು ಸಿಗರೇಟ, ಗುಟ್ಕಾ, ಬೀಡಿ ನಿಯಂತ್ರಣ ಅವಶ್ಯಕ ಎಂದರು.

ತಂಡದಲ್ಲಿ ತಾಲೂಕು ನೋಡಲ್ ಅಧಿಕಾರಿ ಆರ್.ಸಿ.ಮೇತ್ರಿ,ಆರೋಗ್ಯ ಇಲಾಖೆಯ ಅಧಿಕಾರಿ ಸುನಂದಾ ಅಂಬಲಗಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಿ.ಎಸ್.ಕರ್ಜಗಿ, ಎನ್.ಎಂ.ನಿಡಗುಂದಿ ಮತ್ತಿತರಿದ್ದರು.