100 ರೂ ಗಡಿ ದಾಟಿದ ಪೆಟ್ರೋಲ್ ದರ

ನವದೆಹಲಿ, ಮೇ.೧೬- ದೇಶದಲ್ಲಿ ಕಳೆದ ಹಲವು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದ್ದು ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ.
ರಾಜಸ್ಥಾನದ ಶ್ರೀರಂಗನಗರ, ಮಧ್ಯಪ್ರದೇಶದ ಇಂಧೋರ್ , ಭೋಪಾಲ್, ರೇವಾ, ಅನ್ನುಪುರ ಹಾಗು ಮಹಾರಾಷ್ಟ್ರ ದ ಪರ್ಭಾನಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ೧೦೦ರೂಪಾಯಿ ಗಡಿದಾಟಿದೆ
ಪಶ್ಚಿಮಬಂಗಾಳ ಸೇರಿದಂತೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆ ಮಾಡಿದ ಕೇಂದ್ರ ಸರ್ಕಾರ ಇದೀಗ ಮತ್ತೆ ಸತತವಾಗಿ ಏರಿಕೆ ಮಾಡುವ ಮೂಲಕ ವಾಹನ ಸವಾರರ
ಕೆಂಗಣ್ಣಿಗೆ ಗುರಿಯಾಗಿದೆ.
ಪೆಟ್ರೋಲ್ ೨೪ ಪೈಸೆ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ ೨೭ ಪೈಸೆ ಹೆಚ್ಚಳ ಮಾಡಲಾಗಿದೆ ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ೯೨.೫೮. ಮತ್ತು ಡೀಸೆಲ್ ಬೆಲೆ ೮೩.೨೨ ಏರಿಕೆಯಾಗಿದೆ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ೯೮.೮೮, ಡೀಸೆಲ್ ಬೆಲೆ ೯೦.೪೦ರೂಪಾಯಿಗೆ ಹೆಚ್ಚಳವಾಗಿದೆ.
ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ೯೪.೩೧, ಡೀಸೆಲ್ ಬೆಲೆ ೮೮.೦೭ ಹೆಚ್ಚಾಗಿದ್ದರೆ ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ೯೨.೬೭. ಹಾಗು ಡೀಸೆಲ್ ಬೆಲೆ೮೬.೦೬ ರೂಪಾಯಿಗೆ ಹೆಚ್ಚಳವಾಗಿದೆ.
ಪ್ರತಿನಿತ್ಯ ಪ್ರೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದ್ದು ಕೇಂದ್ರ ಸರ್ಕಾರ ಆ ಕಡೆ ಗಮನ ಹರಿಸಲಿ ಇದು ತೈಲ ಕಂಪನಿಗಳಿಗೆ ಸೇರಿದ್ದು ಎಂದು ಅವುಗಳ ಮೇಲೆ ಹಾಕುವ ಕೆಲಸ ಮಾಡುತ್ತಿದೆ

ನಗರ, ಪೆಟ್ರೋಲ್, ಡೀಸೆಲ್ ದರ
( ಪ್ರತಿ ಲೀಟರ್)

  • ದೆಹಲಿ- ೯೨.೫೮. , ೮೩.೨೨
  • ಮುಂಬೈ- ೯೮.೮೮ , ೯೦.೪೦
  • ಚೆನ್ನೈ- ೯೪.೩೧. ,೮೮.೦೭
  • ಕೊಲ್ಕತ್ತಾ – ೯೨.೬೭, ೮೬.೦೬