100 ರೂ. ಗಡಿದಾಟಿದ ಟೊಮೊಟೊ

ಬೆಂಗಳೂರು,ನ.೨೦- ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗ ಪೆಟ್ರೋಲ್ ಬಳಿಕ ಟೊಮೊಟೊ ಬೆಲೆ ಶತಕದಾಟಿದೆ. ಬೆಂಗಳೂರಿನಲ್ಲಿ ೧ ಕೆಜಿ ಟೊಮೊಟೊ ಬೆಲೆ ೧೦೦ ರೂ. ಗಡಿ ದಾಟಿದೆ.
ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಟೊಮೊಟೊ ಬೆಲೆ ೧೦೦ ರೂ. ಗಡಿ ದಾಟಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ೧ ಕೆ.ಜಿ ಬೆಲೆ ೯೮-೧೦೦ ರೂ. ಮತ್ತು ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ೯೩ ರೂ. ಗೆ ಏರಿಕೆಯಾಗಿದೆ.
ಭಾರೀ ಮಳೆಯಿಂದಾಗಿ ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಟೊಮೊಟೊ ಬೆಳೆ ಹಾನಿಯಾಗಿದೆ. ಹೀಗಾಗಿ ಟೊಮೊಟೊ ಬೆಲೆ ಏರಿಕೆಯಾಗುತ್ತಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಬೀನ್ಸ್, ಈರುಳ್ಳಿ, ಟೊಮೊಟೊ, ಹೀರೇಕಾಯಿ, ತೊಗರಿ ಕಾಯಿ, ಬೆಂಡೆಕಾಯಿ, ಬದನೆಕಾಯಿ ಸೇರಿದಂತೆ ಕೆಲ ತರಕಾರಿಗಳ ಬೆಲೆ ೧೦೦ ರೂ ಗಡಿ ದಾಟಿದೆ. ಕ್ಯಾಪ್ಸಿಕಾಂ, ತೊಂಡೆಕಾಯಿ, ಕ್ಯಾರೇಟ್, ನುಗ್ಗೇಕಾಯಿ ಬೆಲೆ, ಸೊಪ್ಪಿನ ದರಗಳಲ್ಲಿಯೂ ಏರಿಕೆ ಕಂಡಿವೆ.