100 ಟ್ರೈಲರ್ ಅನಾವರಣ

* ಚಿ.ಗೊ‌ ರಮೇಶ್

ಹಿರಿಯ ನಟ ,ನಿರ್ದೇಶಕ ರಮೇಶ್ ಅರವಿಂದ್ ನಟಿಸಿ ನಿರ್ದೇಶನ ಮಾಡಿರುವ 100 ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನವಾರ ತೆರೆಗೆ ಬರಲಿದೆ.

ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. 100 ಸಾಮಾಜಿಕ ಸಂದೇಶದ ಜೊತೆಗೆ ಕೌಟುಂಬಿಕ ಮನರಂಜನಾ ಅಂಶ ಒಳಗೊಂಡ ಚಿತ್ರ ಎಂದು ಮಾತಿ್ಗಿಗಿಳಿದರು ನಿರ್ದೇಶಕ ಕಮ್ ನಟ ರಮೇಶ್ ಅರವಿಂದ್.

100 ಚಿತ್ರದಲ್ಲಿ ಪೊಲೀಸ್ ಕಥೆ ಇದ್ದು, ಫ್ಯಾಮಿಲಿ ಥ್ರಿಲ್ಲರ್ ಸಿನಿಮಾ ಎನ್ನಬಹುದು. ಸಣ್ಣವರು ಇದ್ದಾಗ ತಂದೆ ತಾಯಿ ಬೇರೆಯವರ ಕಡೆಯಿಂದ ಚಾಕೊಲೇಟ್ ತಗೆದುಕೊಳ್ಳಲು ಬಿಡತಾ ಇರಲಿಲ್ಲ. ಈಗ ಮೊಬೈಲ್ ಮುಖೇನ ಹೊರಗಿನವರು ಸರಳವಾಗಿ ಮನೆಗೆ ನುಗ್ಗುತ್ತಿದ್ದಾರೆ. ಹೀಗೆ ಬಂದವರು ಎನೆಲ್ಲಾ ಅನಾಹುತ ಮಾಡುತ್ತಿದ್ದಾರೆ ಎಂಬುದನ್ನು ತೋರಿಸಲಾಗಿದೆ ಎಂದರು.

ಚಿತ್ರದ ಕಥೆ ಸದ್ಯದ ಪರಿಸ್ಥಿತಿಗೆ ಆಪ್ತವಾಗಿದೆ ನಿರ್ಮಾಪಕರು ತುಂಬಾ ಆಸಕ್ತಿ ವಹಿಸಿ ಸಿನಿಮಾ ಮಾಡಿದ್ದಾರೆ. ಸತ್ಯ ಹೆಗಡೆ ಅದ್ಭುತ ಛಾಯಾಗ್ರಹಣ ಕಾಣಬಹುದು. ತೆಲಗು ನಟಿ ಪೂರ್ಣ, ರಚಿತಾ ರಾಮ್ ಮುಖ್ಯ ಪಾತ್ರ ಮಾಡಿದ್ದಾರ ಎನ್ನುವ ವಿವರ ಅವರದು.

ತೆಲುಗು ಭಾಷೆಗೆ ಡಬ್ ಮಾಡಲಾಗಿದ್ದು ರವಿ ಬಸ್ರೂರು ಹಿನ್ನೆಲೆ ಸಂಗೀತ ಮಾಡಿದ್ದಾರೆ. ೨ ಗಂಟೆ ಸಿನಿಮಾ ಇದ್ದು, ಗೆಳೆಯನ ಜೀವನದಲ್ಲಿ ನಡೆದ ಒಂದು ಅಂಶ ಬಳಸಿಕೊಳ್ಳಲಾಗಿದೆ’ ಎನ್ನುವರು.

ನಿರ್ಮಾಪಕ ರಮೇಶ್ ರೆಡ್ಡಿ ‘ನಿಮ್ಮ ಸಹಾಯ ಬೇಕು. ಈಗಾಗಲೇ ಮೂರು ಸಿನಿಮಾ ಮಾಡಿದ್ದು 100 ಮೇಲೆ ವಿಶೇಷವಾದ ಪ್ರೀತಿ ಇದೆ. ಸಿನಿಮಾ ಪ್ರಾರಂಭ ಮಾಡಿದ್ದು, ಮುಗಿದದ್ದು ಗೊತ್ತಾಗಲಿಲ್ಲ. ನೀಟಾಗಿ ಮಾಡಿದ ಸಿನಿಮಾ ಇದು. ಎಸ್ ಪಿ ಸೂರಜ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು. ಈಗಾಗಲೇ ಚಿತ್ರದ ಒಟಿಟಿ ಹಾಗೂ ಸೆಟ್ ಲೈಟ್ ಹಕ್ಕು ಮಾರಾಟ ಮಾಡಲಾಗಿದೆ’ ಎಂದರು.