100 “ಆಂಟಿ”ಕ್ಯೂ ಹಿಂದಿರುಗಿಸಲು ಅಮೆರಿಕಾ ಸಮ್ಮತಿ: ಪ್ರಧಾನಿ

ವಾಷಿಂಗ್ಟನ್,ಜೂ.24- ನಮ್ಮಿಂದ ಕದ್ದ ಭಾರತದ 100ಕ್ಕೂ ಹೆಚ್ಚು ಪುರಾತನ ವಸ್ತು (ಆಂಟಿ”ಕ್ಯೂ) ಗಳನ್ನು ಹಿಂದಿರುಗಿಸಲು ಅಮೆರಿಕಾ ಸರ್ಕಾರ ನಿರ್ಧರಿಸಿದೆ ಸಂತಸ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಪುರಾತನ ವಸ್ತುಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ತಲುಪಿವೆ. ಇವುಗಳನ್ನು ಭಾರತಕ್ಕೆ ಹಿಂದಿರುಗಿಸಲು ಸಮ್ಮತಿಸಿದಕ್ಕಾಗಿ ಅಮೆರಿಕ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ನಾಲ್ಕು ದಿನಗಳ ಯಶಸ್ವಿ ಅಮೇರಿಕಾ ಪ್ರವಾಸ ಕೊನೆಯಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ
ನಮ್ಮಿಂದ ಕದ್ದ ಭಾರತದ 100ಕ್ಕೂ ಹೆಚ್ಚು ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಲು ಅಮೆರಿಕ ಸರ್ಕಾರ ನಿರ್ಧರಿಸುವುದು ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ.

ಭಾರತ ಮತ್ತು ಅಮೇರಿಕಾದ ನಡುವಿನ ಉತ್ತಮ ಸಂಬಂಧದ ಭಾಗವಾಗಿ 100 ಪುರಾತನ ವಸ್ತುಗಳನ್ನು ಮರಳಿ ಹಿಂದಿರುಗಿಸಲು ಸಮ್ಮತಿಸಿದೆ. ಇದರಿಂದ ಉಭಯ ದೇಶಗಳ ನಡುವೆ ಸ್ನೇಹ ಸಂಬಂಧ ಮತ್ತಷ್ಟು ಹೆಚ್ಚಲು ನೆರವಾಗಲಿದೆ ಎಂದು ತಿಳಿಸಿದ್ದಾರೆ.

ಭಾರತದ ಸಂಸ್ಕøತಿ ಮತ್ತು ಆದ್ಮಾತ್ಮಿಕ ಪರಂಪರೆ ಪುನರ್ ಸ್ಥಾಪಿಸಲು ನೂರು ಪುರಾತನ ವಸ್ತುಗಳು ಮತ್ತಷ್ಟು ಸಹಕಾರ ನೀಡಲಿದೆ ಎಂದು ಹೇಳಿರುವ ಅವರು ಅಪರೂಪದ ವಸ್ತುಗಳನ್ನು ಮರಳಿ ಪಡೆಯುತ್ತಿರುವುದು ಪ್ರಧಾನಿಯಾಗಿ ಖುಷಿಕೊಟ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

“ಶತಮಾನಗಳಿಂದ, ಅಸಂಖ್ಯಾತ ಬೆಲೆಬಾಳುವ ಕಲಾಕೃತಿಗಳು, ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆ ವಸ್ತುಗಳನ್ನು ಕದ್ದು ವಿದೇಶಕ್ಕೆ ಕಳ್ಳಸಾಗಣೆ ಮಾಡಲಾಗಿದೆ. ಸರ್ಕಾರ ‘ಭಾರತೀಯ ಕಲಾಕೃತಿಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮರಳಿ ತರಲು ಪೂರ್ವಭಾವಿ ವಿಧಾನವನ್ನು ಅಳವಡಿಸಿಕೊಂಡಿದೆ” ಎಂದು ತಿಳಿಸಿದೆ.

4 ದಶಲಕ್ಷ ಡಾಲರ್ ಮೌಲ್ಯದ ವಸ್ತು ವಾಪಸ್

2014ರಿಂದ ಇಲ್ಲಿಯ ತನಕ ವಿವಿಧ ದೇಶಗಳಿಂದ ಒಟ್ಟು 251 ಪುರಾತನ ವಸ್ತುಗಳನ್ನು ಭಾರತಕ್ಕೆ ಮರಳಿ ತರಲಾಗಿದೆ, ಇವುಗಳ ಮೌಲ್ಯ ಸುಮಾರು 4 ದಶಲಕ್ಷ ಅಮೇರಿಕಾ ಡಾಲರ್ ಮೊತ್ತವಾಗಿದೆ ಎಂದು ಹೇಳಲಾಗಿದೆ.

ಅಫ್ಘಾನಿಸ್ತಾನ, ಕಾಂಬೋಡಿಯಾ, ಭಾರತ, ಇಂಡೋನೇಷ್ಯಾ, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್ ಸೇರಿದಂತೆ ಇನ್ನಿತೆ ದೇಶಗಳಿಗೆ ಕದ್ದ ಸಾಗಿಸಿದ್ದ ವಸ್ತುಗಳನ್ನು ವಾಪಸ್ ತರಲಾಗಿದೆ.