100ಕೆಜಿ ಗಾಂಜಾ ಜಪ್ತಿ

ಬೀದರ್,ಏ.8-ಜಹಿರಾಬಾದ ಕಡೆಯಿಂದ ಟಾಟಾ ಸುಮೋ ವಾಹನದಲ್ಲಿ ಅನಧಿಕೃತವಾಗಿ ಗಾಂಜಾ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇಲೆ ತಾಳಮಡಗಿ ಗಾಂಧಿ ನಗರದ ನಿಂಬೂರ ಕ್ರಾಸ್ ಹತ್ತಿರ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 1,00,38,500 ರೂ.ಮೌಲ್ಯದ 100 ಕೆಜಿ 385 ಗ್ರಾಂ ಗಾಂಜಾ (2 ಕೆಜಿ ತೂಕದ 50 ಪಾಕೇಟ್), 4 ಮೊಬೈಲ್, 800 ರೂ.ನಗದು, ಒಂದು ಟಾಟಾ ಸುಮೋ ಸೇರಿ 3 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಎಸ್.ಪಿ.ಚನ್ನಬಸವಣ್ಣ ಎಸ್.ಎಲ್., ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್, ಸಹಾಯಕ ಪೊಲೀಸ್ ಅಧೀಕ್ಷಕ ಶಿವಾಂಶು ರಜಪೂತ, ಚಿಟಗುಪ್ಪ ಸಿಪಿಐ ಮಹೇಶಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಮನ್ನಾಎಖ್ಖೆಳ್ಳಿ ಪಿಎಸ್‍ಐ ಬಸವರಾಜು, ಚಿಟಗುಪ್ಪಾ ಪಿಎಸ್‍ಐ ಮಹೇಂದ್ರಕುಮಾರ, ಎಫ್.ಎಸ್.ಟಿ.ಅಧಿಕಾರಿ ಧೂಳಪ್ಪಾ ಹೊಸಳ್ಳಿ, ಮನ್ನಾಎಖ್ಖೆಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಜನಾರ್ಧನ, ಸುನೀಲಕುಮಾರ, ಸಂದೀಪ, ಸಂಜುಕುಮಾರ ರಾಠೋಡ್, ಜೈರಾಮ, ಸಿದ್ದಪ್ಪಾ, ಶಿವಗೇನಿ, ಸಂಜಯ ಪಾಟೀಲ, ಚಿಟಗುಪ್ಪಾ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಶಿವಶರಣ, ನಂದಕುಮಾರ, ಬಸವರೆಡ್ಡಿ, ನಾಮಾನಂದ, ವಿಜಯಕುಮಾರ, ಮಲ್ಲಿಕಾರ್ಜುನ ಅವರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿ ಗಾಂಜಾ ಜಪ್ತಿಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮನ್ನಾಎಖ್ಖೆಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.