10, 11ರಂದು ಸರಸ್ವತಿ ಶಾಲೆ ಹಿರಿಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ: ಪ್ರೊ.ವೀಣಾ ಜಲಾದೆ

ಬೀದರ್: ಮೇ.8:ಈ ತಿಂಗಳ 10 ಹಾಗೂ 11ರಂದು ಸರಸ್ವತಿ ಶಾಲೆ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಗುರುವಂದನಾ ಹಾಗೂ ಹಿರಿಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ ಹಮ್ಮಿಕೊಳ್ಲಲಾಗಿದೆ ಎಂದು ಸರಸ್ವತಿ ಶಾಲೆ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಹಾಗೂ ಬಸವೇಶ್ವರ ಬಿಇಡಿ ಕಾಲೇಜಿನ ಪ್ರಾಧ್ಯಾಪಕಿ ಪ್ರೊ.ವೀಣಾ ಜಲಾದೆ ಹೇಳಿದರು.
ಬುಧವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, 1991ರಿಂದ 2005ರ ವರೆಗಿನ ಸುಮಾರು 2 ಸಾವಿರ ಹಳೆ ವಿದ್ಯಾರ್ಥಿಗಳು ಸೇರಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. 150 ನಿವೃತ್ತ ಶಿಕ್ಷಕರಿಗೆ ಇದೇ ವೇಳೆ ಸನ್ಮಾನಿಸಲಾಗುತ್ತದೆ ಎಂದರು.
ಕಾರ್ಯಕ್ರಮದ ನಿಮಿತ್ಯ ಅನೇಕ ಸ್ಪರ್ಧೆಗಳನ್ನು ಹಮ್ಮಿಕೊಳ್ಲಲಾಗಿದೆ. ವಿಜೇತರಿಗೆ ಇದೇ ವೇಳೆ ಬಹುಮಾನ ಸಹ ನೀಡಲಾಗುವುದು ಎಂದವರು ತಿಳಿಸಿದರು.
ಕಾರ್ಯಕ್ರಮದ ವಿವರಣೆ ನೀಡಿದ ಜಲಾದೆ ಅವರು, ಈ ತಿಂಗಳ: 10ರಂದು ಬೆಳಿಗ್ಗೆ ನಗರದ ಸರಸ್ವತಿ ಶಾಲೆ ಅವರಣದಲ್ಲಿ ಬಸವ ಜಯಂತಿ ಹಾಗೂ ಕ್ರೀಡೋತ್ಸವ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸರಸ್ವತಿ ಶಾಲೆಯ ಹಿರಿಯ ಶಿಕ್ಷಕಿ ಸುಲೋಚನಾ ಅಕ್ಕ ನೆರವೇರಿಸಲಿದ್ದು, ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಸ್ಥಾಪಕ ಕಾರ್ಯದರ್ಶಿ ನಾರಾಯಣರಾವ ಮುಖೇಡಕರ್ ಗೌರವ ಉಪಸ್ಥಿತರಿರುವರು. ಶಾಲೆಯ ಹಿರಿಯ ಶಿಕ್ಷಕ ಭಗುಸಿಂಗ್ ಜಾಧವ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಸ್ಥೆಯ ಹಾಲಿ ಕಾಯ್ದರ್ಶಿ ಹಣಮಂತರಾವ ಪಾಟೀಲ ಅಧ್ಯಕ್ಷತೆ ವಹಿಸುವರು. ವಿದ್ಯಾರ್ಥಿ ಪ್ರತಿನಿಧಿಗಳಾಗಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ರವಿ ಮೂರ್ತಿ ಪಾಲ್ಗೊಳ್ಳುವರು ಎಂದು ಜಲಾದೆ ತಿಳಿಸಿದರು.
ಈ ತಿಂಗಳ 11ರಂದು ಪಾಪನಶ ಗೇಟ್ ಒಳಗಡೆ ಇರುವ ಶ್ರೀ ಸ್ವಾಮಿ ಸಮರ್ಥ ಕಲ್ಯಾಣ ಮಂಟಪದಲ್ಲಿ ಗುರುವಂದನಾ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ ಜರುಗಲಿದೆ. ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಅಕ್ಕ ಉದ್ಘಾಟಿಸಲಿದ್ದು, ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್ ಬಿರಾದಾರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬೆಂಗಳೂರು ರೂಟ್ಸ್ ಐಂಡ್ ಪ್ರಾಂಚೆಸ್ ರಿಸರ್ಚ್ ಫೌಂಡೆಶನ್‍ನ ಜಿ.ಆರ್ ಜಗದೀಶ ವಕ್ತಾರರಾಗಿ ಪಾಲ್ಗೊಳ್ಳುವರು. ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಅಧ್ಯಕ್ಷ ಪ್ರೊ.ಎಸ್.ಬಿ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸುವರು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷಳಾಗಿ ತಾನು ಅಂದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರತಿನಿಧಿಯಾಗಿ ಭಾಗಿಯಾಗುವುದಾಗಿ ಹೇಳಿದರು.
ಅಂದು ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಲಿದ್ದು, ಶಾಲೆಯ ಹೊಇರಿಯ ಶಿಕ್ಷಕಿ ದಾಕ್ಷಾಯಣಿ ಅಕ್ಕ ಹಾಗೂ ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಉಪಾಧ್ಯಕ್ಷ ನಾಗೇಶ ರೆಡ್ಡಿ ಸಮಾರೋಪ ಮಾತುಗಳನ್ನಾಡುವರು. ಹಿರಿಯ ಶಿಕ್ಷಕಿಯರಾದ ಸರಸ್ವತಿ ಸ್ವಾಮಿ, ಸತ್ಯಪ್ರಭಾ ಗರ್ಜೆ, ರೇನೂಕಾ ಕುಲಕರ್ಣಿ ಹಾಗೂ ಮಲ್ಲಿಕಾರ್ಜುನ್ ಪಾಟೀಲ ಗೌರವ ಉಪಸ್ಥಿತರಿರುವರು. ಇದೇ ವೇಳೆ ಹಿರಿಯ ಶಿಕ್ಷಕರು ಹಾಗೂ ಹಳೆ ವಿದ್ಯಾರ್ತಿಗಳಿಂದ ಅನಿಸಿಕೆ ತಿಳಿಸುವರು ಎಂದು ಕಾರ್ಯಕ್ರಮದ ಸಂಪುರ್ಣ ವಿವರ ಬೀಡಿದರು. ಇನ್ನು ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸಿದರೆ ಕೂಡಲೇ ರವಿ ಮೂರ್ತಿ- , 9902392827, 9005240222- ವಿರೇಶ ಸ್ವಾಮಿ, 9845455579- ಸತೀಶ ಸ್ವಾಮಿ ಇವರನ್ನು ಸಂಪರ್ಕಿಸಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದೆಂದು ಪ್ರೊ.ವೀಣಾ ಕರೆ ಕೊಟ್ಟರು.
ಪತ್ರಿಕಾ ಗೋಷ್ಟಿಯಲ್ಲಿ ರಾಜಕುಮಾರ ಶೀಲವಂತ, ಸತೀಸ ಸ್ವಾಮಿ, ರವಿ ಮೂರ್ತಿ, ಅನಿಲ ಮದಕಟ್ಟಿ, ವಿರೇಶ ಸ್ವಾಮಿ, ಸಂತೋಷ ಸೊರಳ್ಳಿ, ಅರುಣ ಹೊತಪೇಟ್, ಅಮರ ಶಟಕಾರ, ಪ್ರಕಾಶ ಪುಷ್ಪಕ್ ಜಾಧವ್ ಉಪಸ್ತೀತರಿದ್ದರು.