10 ಸಾವಿರ ಸಜ್ಜಕದ ಹೋಳಿಗೆ


ಗದಗ,ಜ.18: ನಗರದ ಹಾಲಕೇರಿ ಶ್ರೀಮಠದಲ್ಲಿ ತಿಂಗಳು ಪರ್ಯಂತ ನಡೆಯುತ್ತಿರುವ ಬಸವ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ನಗರದ ವಾರ್ಡ ನಂ. 28 ರ ಪಂಚಾಕ್ಷರಿ ನಗರದ ಸಮಸ್ತ ಗುರುಹಿರಿಯರು, ಮಹಿಳೆಯರು ಹಾಗೂ ಭಕ್ತರು ಪುರಾಣ ಪ್ರವಚನಕ್ಕೆ ಆಗಮಿಸುವ ಭಕ್ತರ ಪ್ರಸಾದಕ್ಕಾಗಿ ಸುಮಾರು 10 ಸಾವಿರ ಸಜ್ಜಕದ (ಸಿಹಿ ಹೋಳಿಗೆ) ಹೋಳಿಗೆಗಳನ್ನು ಬಸವ ಬುತ್ತಿಗಾಗಿ ತಯಾರಿಸಿದರು.
ಈ ಸಂದರ್ಭದಲ್ಲಿ ಹಾಲಕೇರಿ-ಬಳ್ಳಾರಿ-ಹೊಸಪೇಟೆ- ಗದಗ ಶ್ರೀಮಠದ ಪೂಜ್ಯಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಸೇರಿದಂತೆ ಅನೇಕ ಪೂಜ್ಯರು ಉಪಸ್ಥಿತರಿದ್ದರು.