10 ಸಾವಿರ ಉದ್ಯೋಗ ಕಡಿತಕ್ಕೆ ಫೇಸ್ ಬುಕ್ ಮಾತೃ ಸಂಸ್ಥೆ ಮೇಟಾ ನಿರ್ದಾರ

ನವದೆಹಲಿ,.ಮಾ.14- ಸಾಮಾಜಿಕ ಜಾಲತಾಣ ವೇದಿಕೆಯಾದ ಫೇಸ್ ಬುಕ್ ನ‌ ಮಾತೃ ಸಂಸ್ಥೆ ಮೇಟಾ ಮತ್ತೆ ಜಾಗತಿಕವಾಗಿ 10 ಸಾವಿರ ಉದ್ಯೋಗ ಕಡಿತ ಮಾಡಲು ಉದ್ದೇಶಿಸಿದೆ.

11,000 ಉದ್ಯೋಗಿಗಳನ್ನು ವಜಾಗೊಳಿಸಿದ ನಾಲ್ಕು ತಿಂಗಳ ನಂತರ ಎರಡನೇ ಸುತ್ತಿನಲ್ಲಿ‌ ಮತ್ತೆ 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಪ್ರಕಟಿಸಿದೆ.

ಫೇಸ್‌ಬುಕ್-ಪೋಷಕ ಮೆಟಾ ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂಧಿಗಳ ಪೈಕಿ ಜಾಗತಿಕವಾಗಿ 10 ಸಾವಿರ ಮಂದಿಯನ್ನು ಕೆಲಸದಿಂದ ತಡಗೆದು ಹಾಕುವುದಾಗಿ ಪ್ರಕಟಿಸಿದ‌ಎ.

ಇದರ ಜೊತೆಗೆ ಜಗತ್ತಿನಲ್ಲಿ ಇನ್ನೂ ನೇಮಕ ಮಾಡದ ಸುಮಾರು 5,000 ಹೆಚ್ಚುವರಿ ಹುದ್ದೆಗಳನ್ನು ಸದ್ಯಕ್ಕೆ ನೇಮಕ ಮಾಡಿಕೊಳ್ಳದಿರಲಿ ನಿರ್ಧರಿಸಿದೆ ಎಂದು ಮೆಟಾ ಮುಖ್ಯಕಾರ್ಯದರ್ಶಿ ಮಾರ್ಕ್ ಜುಕರ್‌ಬರ್ಗ್ ಘೋಷಿಸಿದ್ದಾರೆ.

ಜಾಗತಿಕವಾಗಿ ಸಿಬ್ಬಂಧಿಯನ್ನು ಕಡಿತ ಮಾಡುವ ಪ್ರಕ್ರಿಯೆ ಕಠಿಣವಾದ ಕೆಲಸ. ಅದರೂ ಅನಿವಾರ್ಯವಾಗಿ ಸಂಸ್ಥೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಜಾಗತಿಕವಾಗಿ ಸಂಸ್ಥೆ ‌ಕೆಲವು ಕಾರ್ಯಕ್ರಮಗಳನ್ನು ಅನಿವಾರ್ಯವಾಗಿ ತಗೆದುಕೊಳ್ಳಲಾಗಿದೆ. ಇದರ ಹೊರತು ಬೇರೆ ಮಾರ್ಗಗಳು ಇರಲಿಲ್ಲ ಎಂದು ಮಾಹಿತಿ ಹಂಚಿಕೊಂಡಿದೆ.