10 ಸಾವಿರಕ್ಕೂ ಅಧಿಕ ಹೋಳಿಗೆ, ಸೀಕರಣೆ ಹೋಳಿಗೆ ಸೀಕರಣೆ ಸ್ವಿಕರಿಸಿದ ಶ್ರೀ ಖಾಸ್ಗತರ ಭಕ್ತರು

ತಾಳಿಕೋಟೆ:ಜೂ.30: ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದ ಜಾತ್ರೋತ್ಸವ ಅಂಗವಾಗಿ ಗುರುವಾರರಂದು ಶ್ರೀ ಮಠದ ವತಿಯಿಂದ ಭಕ್ತಾಧಿಗಳಿಗೆ ಸಿದ್ದಪಡಿಸಲಾದ ಹೂರಣದ ಹೋಳಿಗೆ ಮತ್ತು ಮಾವಿನ ಹಣ್ಣಿನ ಸೀಕರಣೆ, ತುಪ್ಪದ ಪ್ರಸಾದವನ್ನು ಕಿಕ್ಕೀರಿದು ಬಂದ ಭಕ್ತಾಧಿಗಳು ಸೇವಿಸಿ ಪುನಿತರಾದರು.
ಶ್ರೀಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರ ಅಪೇಕ್ಷೆಯ ಮೇರೆಗೆ ಬುಧವಾರರಂದು ರಾತ್ರಿಯಿಂದಲೇ ಹೋಳಿಗೆ ತಯಾರಿಕೆಗಾಗಿ ಹೂರಣ ಸಿದ್ದಪಡಿಸುವದು ಅಲ್ಲದೇ ಮಾವಿನ ಹಣ್ಣಿನ ಸೀಕರಣೆ ಸಿದ್ದಪಡಿಸುವ ಕಾರ್ಯ ಭರದಿಂದ ಸಾಗಿತ್ತು ಸುಮಾರು ನೂರಾರು ಜನ ಭಕ್ತರು ಹೋಳಿಗೆ, ಸೀಕರಣೆ ಬೆಳಿಗ್ಗೆ 9 ಗಂಟೆಯೋಳಗೆ ಸಿದ್ದಪಡಿಸಿ ಭಕ್ತಸಮೂಹಕ್ಕೆ ಯಾವುರೀತಿಯಿಂದ ಪ್ರಸಾದಕ್ಕೆ ತೊಂದರೆಯಾಗದ ರೀತಿಯಲ್ಲಿ ನೋಡಿಕೊಂಡರು.
ಹೋಳಿಗೆ ಮಾವಿನ ಹಣ್ಣಿನ ಸೀಕರಣೆ ಜೊತೆಗೆ ತುಪ್ಪ ಅಲ್ಲದೇ ರೋಟ್ಟಿ, ಸಾಂಬರ, ಅನ್ನವನ್ನೂ ಸಹ ಸಿದ್ದಪಡಿಸಿ ಭಕ್ತಾಧಿಗಳಿಗೆ ಪ್ರಸಾದ ರೂಪದಲ್ಲಿ ಹೋಟ್ಟೆತುಂಬ ಉಣ್ಣುವಹಾಗೆ ನೀಡಲಾಯಿತು. ನಿತ್ಯ ಶ್ರೀಮಠದ ಪ್ರಸಾದಕ್ಕೆ ಭಕ್ತಸಮೂಹವು ಹೆಚ್ಚುತ್ತಿರುವದರಿಂದ ಎಲ್ಲರೀತಿಯಿಂದಲೂ ಶ್ರೀಮಠವು ಸಿದ್ದಪಡಿಸಿಕೊಂಡಿದೆ.
ಇಂದು 12 ಕ್ವಿಂಟಲ್ ಹುಗ್ಗಿ ಪ್ರಸಾದ
ಶ್ರೀ ಖಾಸ್ಗತ ಮಠದ ಜಾತ್ರೋತ್ಸವ ಅಂಗವಾಗಿ ಶುಕ್ರವಾರರಂದೂ ಕೂಡಾ ವಿಶೇಷವಾಗಿ ಹುಗ್ಗಿ, ತುಪ್ಪದ ಪ್ರಸಾದವನ್ನು ಸುಮಾರು 10 ಸಾವಿರಕ್ಕೂ ಅಧಿಕ ಭಕ್ತಾಧಿಗಳಿಗಾಗಿ ಸಿದ್ದಪಡಿಸಲಾಗುತ್ತಿದ್ದು ಅದರ ಜೊತೆಯಾಗಿ ರೋಟ್ಟಿ, ಅನ್ನ, ಸಾಂಬರಕೂಡಾ ನೀಡಲು ಎಲ್ಲರೀತಿಯಿಂದಲೂ ಸಿದ್ದತೆಕೈಗೊಳ್ಳಲಾಗಿದೆ ಎಂದು ಶ್ರೀಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಅವರು ತಿಳಿಸಿದ್ದಾರೆ.
ಇಂದು ಗೋಪಾಲ ಕಾವಲಿ ಒಡೆಯುವ ಕಾರ್ಯಕ್ರಮ
ಶ್ರೀ ಖಾಸ್ಗತ ಮಹಾ ಶಿವಯೋಗಿಗಳ ಜಾತ್ರೆ ಹಾಗೂ ರಥೋತ್ಸವ ಅಂಗವಾಗಿ ಶುಕ್ರವಾರ ನಸುಕಿನ ಜಾವ 5-30 ಕ್ಕೆ ಅಸಂಖ್ಯಾತ ಭಕ್ತ ಸಮೂಹದ ಸಮ್ಮುಖದಲ್ಲಿ ಗೋಪಾಲ ಕಾವಲಿ(ಮೊಸರು ಗಡಿಗೆ) ಒಡೆಯುವ ಕಾರ್ಯಕ್ರಮವು ಭಕ್ತಿ ಭಾವದೊಂದಿಗೆ ಜರುಗಲಿದೆ. 9 ದಿನಗಳ ಕಾಲ ನಡೆದು ಬಂದ ಸಪ್ತ ಭಜನಾ ಕಾರ್ಯಕ್ರಮವು ಗೋಪಾಲಕಾವಲಿ(ಮೊಸರುಗಡಿಗೆ) ಒಡೆಯುವದರ ಮೂಲಕ ಮಂಗಲಗೊಳ್ಳಲಿದೆ.
ಶ್ರೀಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಘನ ಅಧ್ಯಕ್ಷತೆಯಲ್ಲಿ ಜರುಗಲಿರುವ ಈ ಗೋಪಾಲ ಕಾವಲಿ ಒಡೆಯುವ ಮುಂಚೆ ಭವ್ಯ ಪ್ರಭಾತ ಪೇರಿಯೊಂದಿಗೆ ಧ್ವಜದ ಮೆರವಣಿಗೆ ನಡೆಯುವದು.