10 ವರ್ಷಗಳ ನಂತರ ಮುಖ್ಯಮಂತ್ರಿಗಳಿಗೆ ಪೌರ ಸನ್ಮಾನ; ವಿಲಾಸ ಪ್ರಭಾವತಿ

ಯಾದಗಿರಿ;ಜ.6: ಕಳೆದ 10 ವರ್ಷಗಳ ಹಿಂದೆ ಯಾದಗಿರಿ ಹೊಸ ಜಿಲ್ಲೆಯ ಉದಯಕ್ಕೆ ಕಾರಣೀಕರ್ತರಾದ ಅಂದಿನ ಹಾಗೂ ಹಾಲಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರಿಗೆ 10 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪೌರ ಸನ್ಮಾನ ಏರ್ಪಡಿಸುವ ಮೂಲಕ ಜಿಲ್ಲೆ ಹಾಗೂ ನಗರದಿಂದ ಋಣ ಸಂದಾಯ ಮಾಡಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್ ಉಪಾದ್ಯಕ್ಷೆ ಶ್ರೀಮತಿ ಪ್ರಭಾವತಿ ಮಾರುತಿ ಕಲಾಲ್ ತಿಳಿಸಿದರು.
ನಗರಸಭೆ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಭಯರು, ಜಿಲ್ಲೆ ಉದಯಕ್ಕೆ ಕಾರಣೀಕರ್ತರಾದ ಬಿ.ಎಸ್. ಯಡಿಯೂರಪ್ಪ ಅವರಿಗೆ ಪೌರ ಸನ್ಮಾನ ನೀಡುವುದು ನಗರಸಭೆಯ ಆದ್ಯ ಕರ್ತವ್ಯವಾಗಿದ್ದು ಇದನ್ನು 10 ವರ್ಷಗ ಬಳಿಕ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಗರದ ವಿವಿಧ ಅಬಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಗೆ ಭಿನ್ನವತ್ತಳೆ ಸಲ್ಲಿಸಲಾಗುವುದು ಎಂದು ತಿಳಿಸಿದ ಅವರು, ನಗರವನ್ನು ಮಾದರಿಯಾಗಿ ಮಾಡಲು ಮುಖ್ಯಮಂತ್ರಿಗಳಿಗೆ ಕೋರಲಾಗುವುದು ನಗರವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ತಿಳಿಸಿದರು.