10 ವರ್ಷಗಳಲ್ಲಿ ಶ್ರೀಲಂಕಾಕ್ಕೆ 1.85 ಶತಕೋಟಿ ಡಾಲರ್ ಸಾಲ: ಜೈಶಂಕರ್

ನವದೆಹಲಿ,ಜು.22- ಕಳೆದ 10 ವರ್ಷಗಳಲ್ಲಿ ಶ್ರೀಲಂಕಾಕ್ಕೆ 1.85 ಶತಕೋಟಿ ಡಾಲರ್ ಮೌಲ್ಯದ ಸಾಲ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

10 ವರ್ಷಗಳಲ್ಲಿ 8 ವಿವಿಧ ವಿಭಾಗದಲ್ಲಿ ಲೈನ್ಸ್ ಆಫ್ ಕ್ರೆಡಿಟ್ ಅನ್ನು ಶ್ರೀಲಂಕಾಕ್ಕೆ 1850.64 ದಶಲಕ್ಷ ಡಾಲರ್‌ಗಳಷ್ಟು ವಿಸ್ತರಿಸಿದೆ ಎಂದು ಹೇಳಿದ್ದಾರೆ.

“ಭಾರತ ಸರ್ಕಾರ ಕಳೆದ 10 ವರ್ಷಗಳಲ್ಲಿ ರೈಲ್ವೇ, ಮೂಲಸೌಕರ್ಯ, ರಕ್ಷಣೆ, ನವೀಕರಿಸಬಹುದಾದ ಇಂಧನ, ಪೆಟ್ರೋಲಿಯಂ ಮತ್ತು ರಸಗೊಬ್ಬರಗಳು ಸೇರಿದಂತೆ 1850.64 ದಶಲಕ್ಷ ಮೊತ್ತದ ಸಾಲ ನೀಡಿದೆ ಎಂದು ಹೇಳಿದ್ದಾರೆ.

ಈ ಕುರಿತು ಡಿಎಂಕೆ ಲೋಕಸಭೆ ಸಂಸದ ಎಸ್ ರಾಮಲಿಂಗಂ ಪ್ರಶ್ನೆಗೆ ಅವರು ಲೋಕಸಭಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಭಾರತವುನ ‘ನೆರೆಹೊರೆ ಮೊದಲು’ ನೀತಿಯ ಅಡಿಯಲ್ಲಿ ತನ್ನ ಆರ್ಥಿಕ ಸವಾಲುಗಳನ್ನು‌ ಎದುರಿಸಲು ಶ್ರೀಲಂಕಾಕ್ಕೆ ತನ್ನ ಆರ್ಥಿಕ ಅಭಿವೃದ್ಧಿಯಲ್ಲಿ ಸಹಾಯ ಮಾಡುವುದನ್ನು ಮುಂದುವರೆಸಿದೆ. ಭಾರತ ನೀಡಿದ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಸಾಲಗಳಿಂದ‌‌ ದ್ವೀಪ ರಾಷ್ಟ್ರಕ್ಕೆ ಸಹಕಾರಿಯಾಗಿದೆ ಎಂದಿದ್ದಾರೆ.

ನೆರೆಹೊರೆ ಮೊದಲು’ ನೀತಿಯ ಅಡಿಯಲ್ಲಿ, ಸರ್ಕಾರವು ತನ್ನ ಎಲ್ಲಾ ನೆರೆಹೊರೆಯವರೊಂದಿಗೆ ಸ್ನೇಹಪರ ಮತ್ತು ಪರಸ್ಪರ ಪ್ರಯೋಜನಕಾರಿ ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಬದ್ಧವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಈ ವಿಷಯ ತಿಳಿಸಿದ್ದಾರೆ.

2022 ರ ಜನವರಿಯಲ್ಲಿ, ಭಾರತ ಸಾರ್ಕ್ ಚೌಕಟ್ಟಿನ ಅಡಿಯಲ್ಲಿ ಶ್ರೀಲಂಕಾಕ್ಕೆ 400 ಶತಕೋಟಿ ಡಾಲರ್ ಕರೆನ್ಸಿ ವಿನಿಮಯ ವಿಸ್ತರಿಸಿತು ಮತ್ತು ಜುಲೈ 6, 2022 ರವರೆಗೆ ಸತತ ಏಷ್ಯನ್ ಕ್ಲಿಯರಿಂಗ್ ಯೂನಿಯನ್ ವಸಾಹತುಗಳನ್ನು ಮುಂದೂಡಿದೆ.‌ಈಗ ಇದರ ಮೊತ್ತ 500 ದಶಲಕ್ಷ ಡಾಲರ್ ಸಾಲದ ಸಾಲವನ್ನು ಶ್ರೀಲಂಕಾಕ್ಕೆ ವಿಸ್ತರಿಸಲಾಗಿದೆ ಎಂದಿದ್ದಾರೆ.

ಭಾರತದಿಂದ ಇಂಧನವನ್ನು ಆಮದು ಮಾಡಿಕೊಳ್ಳುವುದಕ್ಕಾಗಿ” ಶ್ರೀಲಂಕಾ ತಿಳಿಸಿದೆ ಎ ಎಂದು ಸಚಿವರ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.