
ಕೋಲಾರ, ಆ, ೧೪- ಆರ್.ಬಿ.ಐ ಬ್ಯಾಂಕ್ ನಿಂದ ಅಧಿಕೃತವಾಗಿ ಮುದ್ರಿಸಲಾಗಿರುವ ೧೦ ರೂ ಗಳ ನಾಣ್ಯಗಳು ಚಲಾವಣೆಯಲಿದ್ದು, ಎಲ್ಲರೂ ತಮ್ಮ ದಿನ ನಿತ್ಯದ ವಹಿವಾಟುಗಳಲ್ಲಿ ಯಾವೂದೇ ಸಂಶಯವಿಲ್ಲದೆ ಬಳಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಸ್ವಷ್ಟ ಪಡೆಸಿದರು,
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿದ್ದ ಲೀಡ್ ಬ್ಯಾಂಕ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಹಲವು ಕಡೆ ೧೦ ರೂಗಳ ನಾಣ್ಯಗಳನ್ನು ನಿಸೇಧಿಸಲಾಗಿದೆ ಎಂಬ ಸತ್ಯಕ್ಕೆ ದೂರವಾದ ಸಂಗತಿಯು ಪ್ರಚಲಿತದಲ್ಲಿದ್ದು ಸಾರ್ವಜನಿಕರು ಗೊಂದಲಕ್ಕೆ ಒಳಗಾಗಿದ್ದಾರೆ. ಅದರೆ ಕೇಂದ್ರ ಸರ್ಕಾರವಾಗಲಿ ಅಥವಾ ರಿಸರ್ವ ಬ್ಯಾಂಕ್ ಅಫ್ ಇಂಡಿಯಾ ವತಿಯಿಂದ ೧೦ ರೂ ನಾಣ್ಯವನ್ನು ನಿಷೇಧಿಸಿರುವ ಬಗ್ಗೆ ಅಥವಾ ಚಲಾವಣೆಯಿಂದ ಹಿಂಪಡೆದಿರುವುದಾಗಿ ಅಧಿಕೃತವಾದ ಅದೇಶಗಳು ಜಾರಿ ಮಾಡಿಲ್ಲ ಎಂದರು. ಸಾರ್ವಜನಿಕರು ಈ ರೀತಿಯ ಅಧಾರ ರಹಿತವಾದ ಸುದ್ದಿಗಳನ್ನು ನಂಬದೆ ರೂ ೧೦ ನಾಣ್ಯಗಳನ್ನು ಚಲಾಯಿಸ ಬಹುದಾಗಿದೆ. ಯಾರು ಸಹ ೧೦ ರೂ ನಾಣ್ಯಗಳನ್ನು ನಿರಾಕರಿಸದೆ ಸ್ವೀಕರಿಸ ಬಹುದಾಗಿದೆ ದಾರಳವಾಗಿ ಬಳಿಸ ಬಹುದಾಗಿದೆ ಎಂದು ಹೇಳಿದರು,
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಸ್.ಸುದೀರ್ ಮಾತನಾಡಿ ಸಾರ್ವಜನಿಕರು ಯಾವೂದೇ ಗೊಂದಲಕ್ಕೆ ಒಳಗಾಗದೆ ರೂ ೧೦ ನಾಣ್ಯಗಳನ್ನು ಬಳಿಸ ಬಹುದಾಗಿದೆ. ಬ್ಯಾಂಕ್‌ಗಳಲ್ಲಿ ಠೇವಣೆ ಮಾಡಬಹುದಾಗಿದೆ. ೧೦ ರೂ ನಾಣ್ಯಗಳನ್ನು ಸ್ವೀಕರಿಸದೆ ನಿರಾಕರಿಸುವುದು ಕಾಯ್ದೆ ೨೦೧೧ರ ಸೆಕ್ಷರ್ಣ ೬(೧) ಪ್ರಕರ ಉಲ್ಲಂಘನೆಯಾಗಲಿದೆ ಎಂದರು,
ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳು, ವ್ಯಾಪಾರಸ್ಥರು,ಸಾರ್ವಜನಿಕರು ೧೦ ರೂ ನಾಣ್ಯಗಳನ್ನು ಮುಕ್ತವಾಗಿ ಬಳಿಸ ಬಹುದಾಗಿದೆ. ರೂ ೧೦ ನಾಣ್ಯಗಳನ್ನು ಬಳಿಸುವುದರಿಂದ ಸಾರ್ವಜನಿಕವಲಯದಲ್ಲಿ ಚಿಲ್ಲರೆ ಸಮಸ್ಯೆಗಳನ್ನು ನೀಗಿಸ ಬಹುದಾಗಿದೆ. ಈಗಾಗಲೇ ಆರ್.ಬಿ.ಐ. ಹಲವಾರು ಭಾರಿ ರೂ ೧೦ ನಾಣ್ಯವನ್ನು ಹಿಂಪಡೆದಿಲ್ಲ ಎಂದು ಸ್ವಷ್ಟ ಪಡೆಸಿದ್ದರೂ ಸಹಾ ಸಾರ್ವಜನಿಕರು ಗೊಂದಲಕ್ಕೆ ಒಳಾಗಾಗುತ್ತಲೆ ಇದ್ದಾರೆ. ಅದ್ದರಿಂದ ಮುಂದಿನ ದಿನಗಳಲ್ಲಿ ೧೦ ರೂ ನಾಣ್ಯಗಳನ್ನು ಮುಕ್ತವಾಗಿ ಚಲಾಯಿಸ ಬಹುದಾಗಿದೆ. ಸುಳ್ಳು ವದಂತಿಗಳನ್ನು ನಂಬಬೇಡಿ ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿದೇರ್ಶಕ ಖಲೀಲ್ ಸಾಬ್, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಶ್ರೀನಿವಾಸ್, ಕೆ.ಎಸ್.ಆರ್.ಟಿ.ಸಿ,ಸಂಸ್ಥೆ ಅಕೌಂಟ್ ಅಫೀಸರ್ ಪಾಂಡುರಂಗನಾಯ್ದು ಭಾಗವಹಿಸಿದ್ದರು,