10 ರೂ.ಗೆ 3 ವಿವಿಧ ಸೊಪ್ಪು


ಸಿರುಗುಪ್ಪ :  ನಿತ್ಯ ಬಳಸುವ ತರಕಾರಿಗಳು ದಿನದಿಂದ ದಿನಕ್ಕೆ ಏರುಳಿತವಾಗುತ್ತಿದ್ದು, ಕಳೆದ 10ದಿನಗಳ ಹಿಂದೆ ಬೆಲೆ ಗಗನಕ್ಕೆ ಏರಿ ಶತಕ ಬಾರಿಸಿದ್ದು, ಇದರಿಂದ ಗ್ರಾಹಕರಿಗೆ ಹೊರೆಯಾಗಿತ್ತು.
  ನಗದರ ಕೆ.ಕೆ.ಆರ್.ಟಿ.ಸಿ ಬಸ್ ನಿಲ್ದಾಣ ಎದುರಿಗೆ ವಿವಿಧ ಸೊಪ್ಪಿನ ಬೆಲೆ ಕುಸಿತದಿಂದಾಗಿ ರೂ.10ಗೆ 3 ವಿವಿಧ  ಸೊಪ್ಪು ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತುರುವುದು ಗ್ರಾಹಕರು ನಿಟ್ಟೂಸಿರು ಬಿಟ್ಟಿದ್ದಾರೆ.
  ಕಳೆದ 10 ದಿನಗಳ ಹಿಂದೆ ಒಂದು ಕೊತ್ತಂಬರಿ ಕಟ್ಟು ರೂ.40, ರಾಜಗಿರಿ ಸೊಪ್ಪು ರೂ.15, ಪನಕನ ಸೊಪ್ಪು ರೂ.20, ಮೆಂತೆ ರೂ.20 ಗೆ ಎರಡು, ಉನಚ್ಚಿಕನ ಸೊಪ್ಪು ರೂ.15, ಪುದಿನ ರೂ.40 ಗೆ ಮಾರಾಟವಾಗಿತ್ತು.
ಇಂದು ಕೊತ್ತಂಬರಿ ರೂ.10 ಗೆ 3, ರಾಜಗಿರಿ ಸೊಪ್ಪು ರೂ.10 ಗೆ 4, ಪನಕನ ಸೊಪ್ಪು ರೂ.10 ಗೆ 3, ಮೆಂತೆ ರೂ.10 ಗೆ 3, ಉನಚ್ಚಿಕನ ಸೊಪ್ಪು ರೂ.10 ಗೆ 3 ಕಟ್ಟು, ಪುದಿನ ರೂ.10 ಎರಡು ಕಟ್ಟು ಖರೀದಿಸಿದ ಗ್ರಾಹಕರು.
ನಮ್ಮ ಜಿಲ್ಲೆ ಮತ್ತು ನೆರೆ ಜಿಲ್ಲೆಯ ರೈತರಿಂದ ನೇರವಾಗಿ ಖರೀದಿಸಿ ಮಾರಾಟ ಮಾಡಿಲಾಗುತ್ತದೆ,

ಹೇಳಿಕೆ:- ಅತಿ ಹೆಚ್ಚಿನ ಲಾಭ ನಿರೀಕ್ಷಿಸದೆ ಕೂಲಿ ಮಾತ್ರ ನಾವು ತೆಗೆದುಕೊಳ್ಳುತ್ತೆವೆ, ಕಳೆದ ತಿಂಗಳು ಸೊಪ್ಪಿನ ಬೆಲೆ ಹೆಚ್ಚಿತ್ತು ಅದನ್ನು ಮನಗಂಡು ರೈತರು ವಿವಿಧ ಸೊಪ್ಪುಗಳನ್ನು ಒಂದೇ ಬಾರಿಗೇ ಮಾರುಕಟ್ಟೆಗೆ ತಂದಿರುವುದರಿಂದ ಬೆಲೆ ಕಡಿಮೆಯಾಗಿ ಕೈಗೆ ಬಂದ ಬೆಳೆ ಬೆಲೆ ಇಲ್ಲದಂತೆಯಾಗಿದೆ. ಇತ್ತಿಚ್ಚೆಗೆ ಯಾವುದೇ ಹಬ್ಬಗಳು, ಮದುವೆ ಸಮಾರಂಭಗಳು, ಯಾವುದೇ ಶುಭ ಕಾರ್ಯಗಳಿಲ್ಲದೆ ಕೂಡ ಬೆಲೆ ಕುಸಿತಕ್ಕೆ ಕಾರಣವಾಗಿದೆ ಎನ್ನುತ್ತಾರೆ ಸೊಪ್ಪು ವ್ಯಾಪಾರಿ ಮಲ್ಲಿಕಾರ್ಜುನ.