10 ರೂ ಗೆ ಟಿಫಿನ್, 20 ರೂ ಗೆ ಊಟ

ಬಳ್ಳಾರಿ ನ 02: ಇಂದಿನ ದುಬಾರಿ ದಿನಗಳಲ್ಲೂ ಕಡಿಮೆ ಧರದಲ್ಲಿ ಊಟ ತಿಂಡಿ ದೊರೆಯುವುದು ಕಷ್ಟಕರ ಆದರೆ ಸಮಾಜ ಸೇವಕ, ಕಾಂಗ್ರೆಸ್ ಪಕ್ಷದ ಯುವ ಮುಖಂಡ, ಸೂರ್ಯ ಕಲಾ ಮತ್ತು ಸೇವಾ ಬಳಗದ ಮುಖ್ಯಸ್ಥ ಅಲುವೇಲು ಸುರೇಶ್ ನಗರದ ಎಪಿಎಂಸಿ ವೃತ್ತದಲ್ಲಿನ ತಮ್ಮ ಹೊಟೇಲ್‍ನಲ್ಲಿ ಕೇವಲ 10 ರೂ ಗೆ ಟಿಫಿನ್ ಮತ್ತು 20 ರೂಗೆ ಒಂದು ಪ್ಲೇಟ್ ಊಟ ನೀಡತೊಡಗಿದ್ದಾರೆ.
ನಿನ್ನೆ ಕನ್ನಡ ರಾಜ್ಯೋತ್ಸವ ಮತ್ತು ತಮ್ಮ ಹುಟ್ಟುಹಬ್ಬದ ಅಂಗವಾಗಿ ಈ ಸೇವೆಯನ್ನು ಆರಂಭಿಸಿದ್ದಾರೆ. ಈ ಕಾರ್ಯಕ್ಕೆ ಚಾಲನೆ ನೀಡಿದ ಗ್ರಾಮೀಣ ಶಾಸಕ ಬಿ ನಾಗೇಂದ್ರ ಅವರು ಮಾತನಾಡಿ ಎಪಿಎಂಸಿ ಕೆಲಸ ನಿರ್ವಹಿಸುವ ಬಡ ಕಾರ್ಮಿಕರಿಗೆ, ರೈತರಿಗೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಬಡಕ ಬಡ ಕುಟುಂಬಗಳಿಗೆ ಅನುಕೂಲವಾಗುವ ರೀತಿಯಲ್ಲಿ 10 ರೂಪಾಯಿಗೆ ಟಿಫಿನ್ ಮತ್ತು 20 ರೂಪಾಯಿಗೆ ಪ್ಲೇಟ್ ಊಟ ನೀಡುತ್ತಿರುವ ಸುರೇಶ್ ಅವರ ಕಾರ್ಯ ಶ್ಲಾಘನೀಯ. ಇವರಿಂದ ಮತ್ತಷ್ಟು ಇಂತಹ ಜನೋಪಯೋಗಿ ಕಾರ್ಯಗಳು ನೆರವೇರಲಿ ಎಂದು ಶುಭ ಹಾರೈಸಿದರು.
ಮುಖಂಡರಾದ ಬಿ ವೆಂಕಟೇಶ್ ಪ್ರಸಾದ್, ಎಪಿಎಂಸಿ ಮಾಜಿ ಸದಸ್ಯ ಪಾಲನ್ನ, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಂ. ಹನುಮ ಕಿಶೋರ್, ಕಾಕರ್ಲ ರವೀಂದ್ರ, ಮಂಜುನಾಥ್, ಶ್ರೀಧರ್ ಮಲ್ಲಯ್ಯ, ಫರಾನ್, ನೂರ್, ಉಮರ್, ಅಲವೇಲು ರಮೇಶ್ ಇನ್ನಿತರಮುಖಂಡರುಗಳು ಅತಿಥಿಗಳಾಗಿ ಆಗಮಿಸಿದ್ದರು.