10 ರಂದು ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವ

ಕಲಬುರಗಿ,ಜ.8-ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವರವೀವ ವರವಿ ” ಶ್ರೀ ಜಗದ್ಗುರು ಮೌನೇಶ್ವರರ ” 23 ನೇ ವರ್ಷದ ಜಾತ್ರಾ ಮಹೋತ್ಸವ ಜರುಗಲಿದೆ.
ಜ.10 ರಂದು ರವಿವಾರ ಬೆಳಿಗ್ಗೆ ಶ್ರೀ ಮೌನೇಶ್ವರ ಮತ್ತು ಶ್ರೀ ವೀರಭದ್ರೇಶ್ವರರ ರುದ್ರಾಭಿಷೇಕ ಶ್ರೀ ಮಹಾಕಾಳಿಕಾದೇವಿಯ ಷೋಡಶೋಪಚಾರ ಪೂಜೆ, ಗಂಟೆಗೆ ಮಹಾ ಮಂಗಳಾರತಿ, 10 ಗಂಟೆಗೆ ಸ್ಥಳೀಯ ಮಹಿಳೇಯರಿಂದ ಶ್ರೀ ಜಗದ್ಗುರು ಮೌನೇಶ್ವರರ ತೋಟ್ಟಿಲ ಕಾರ್ಯಕ್ರಮ ನಂತರ ತಿರ್ಥ ಪ್ರಸಾದ್ ವಿತರಣೆ ನಡೆಯಲಿದೆ.
ಕೋವಿಡ್ ನಿಮಿತ್ಯವಾಗಿ ಈ ಸಲ ಜಾತ್ರಾ ಮಹೋತ್ಸವ ಕಾರ್ಯಕ್ರಮ ಸರಳವಾಗಿ ಜರುಗಲಿದೆ, ಆದ್ದರಿಂದ ಭಕ್ತಾದಿಗಳು ಕೋವಿಡ್ ನಿಯಮದಂತೆ ಮಾಸ್ಕ್ ಹಾಕಿಕೊಂಡು, ಅಂತರ ಕಾಪಾಡಿಕೊಂಡು ತನು, ಮನ, ಧನದಿಂದ ಸೇವೆ ಸಲ್ಲಿಸಿ ಶ್ರೀ ಜಗದ್ಗುರು ಮೌನೇಶ್ವರರ ದರ್ಶನ ಆಶೀರ್ವಾದ ಪಡೆದು ಕೋಳ್ಳಬೇಕೆಂದು ಜಗದ್ಗುರು ಮೌನೇಶ್ವರ ದೇವಸ್ಥಾನ ಸೇವಾದಾರಿಗಳಾದ ಶಿವರಾಜ್ ಶಾಸ್ತ್ರೀ ಮತ್ತು ಅರವಿಂದ್ ಎಮ್ ಪೋದ್ದಾರ ಬೆಣ್ಣಿಶಿರೂರ ಅವರು ಮನವಿ ಮಾಡಿದ್ದಾರೆ.