10 ನೇ ವಾರ್ಡಿನ ಚರಂಡಿ ಸಮಸ್ಯೆ ಪರಿಹರಿಸಲು ಕಾರ್ಪೊರೇಟರ್ ಕೋನಂಕಿ ತಿಲಕ್ ಸೂಚನೆ

ಬಳ್ಳಾರಿ, ಜೂ.06: ನಗರದಲ್ಲಿ ನಿನ್ನೆ ಸಂಜೆ ಭಾರಿ ಮಳೆ ಸುರಿಯಿತು. ಇದರಿಂದ ತೆರೆದ ಚರಂಡಿ ನೀರು ಸಹ ರಸ್ತೆಗಳಿಗೆ ಬಂದು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿತು.
ನಗರದ 10 ನೇ ವಾರ್ಡಿನಲ್ಲಿಯೂ ಈ ಸಮಸ್ಯೆ ಉಂಟಾಗಿದ್ದರಿಂದ. ವಾರ್ಡಿನ ನೂತನ ಕಾರ್ಪೊರೇಟ್ ರ ಕೋನಂಕಿ ತಿಲಕ್ ಅವರು ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಪರಿಶೀಲನೆ ಮಾಡಿದರು.
ಸಮಸ್ಯೆ ಬಗ್ಗೆ ಸ್ಥಳದಲ್ಲಿಂದಲೇ ಪಾಲಿಕೆಯ ಆಯುಕ್ತೆ ಪ್ರೀತಿ ಗೆ ಲೋಟ್ ಮತ್ತು ಎಕ್ಸಿಕ್ಯೂಟಿವ್ ಇಂಜಿನಿಯರ್ ಖಾಜ ಮೊಯಿದ್ದೀನ್, ಜೂನಿಯರ್ ಇಂಜಿನಿಯರ್ ನವೀನ್ ಕರೆ ಮಾಡಿ ತಿಳಿಸಿದರು.
ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್, ಬಸವರಾಜ್ ಅವರೊಂದಿಗೆ, ವಾರ್ಡಿಗೆ ಭೇಟಿಕೊಟ್ಟು ಮುಂದಿನ ದಿನಗಳಲ್ಲಿ ಈ ರೀತಿ ತೊಂದರೆಯಾಗದಂತೆ, ಶಾಶ್ವತ ಪರಿಹಾರ ಕೈಗೊಳ್ಳಲು ಸೂಚಿಸಲಾಯಿತು.
ಕೋನಂಕಿ ತಿಲಕ್ ಅವರು ಶ್ರೀಮಂತರು, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದಿಲ್ಲ ಎಂಬ ಮಾತುಗಳು ಚುನಾವಣೆ ಸಂದರ್ಭದಲ್ಲಿ ಕೇಳಿ ಬಂದಿದ್ದವು. ಆದರೆ ಇದಕ್ಕೆ ಅಪವಾದವೆಂಬುವಂತೆ ನಿನ್ನೆ ತಿಲಕ್ ಸ್ಪಂದಿಸಿದ್ದಾರೆ. ಇದು ಹೀಗೆ ಮುಂದುವರೆಯಬೇಕಿದೆ.