10 ನೇ ತರಗತಿ ಮಕ್ಕಳಿಗೆ ದೀಪದಾನ ಮತ್ತು ಬಿಳ್ಕೋಡುಗೆ

(ಸಂಜೆವಾಣಿ ವಾರ್ತೆ)
ಹುಮನಾಬಾದ್:ಮಾ.30: ತಾಲೂಕಿನ ಹುಡುಗಿ ಗ್ರಾಮದ 10 ನೇ ತರಗತಿಯ ಮಕ್ಕಳಿಗೆ ದೀಪದಾನ ಮತ್ತು ಬಿಳ್ಕೋಡುಗೆ ಸಮಾರಂಭ ಜರುಗಿತು ಮಹಾದೇವಪ್ಪಾ ಉಪ್ಪಿನ ನಿವೃತ್ತ ಪಾಚಾರ್ಯರು ಮಾತನಾಡಿ
ಮಕ್ಕಳ ಉತ್ತಮ ಶ್ರೇಯಸನ್ನು ಸಾಧಿಸಿ ತಂದೆ ತಾಯಿಯರಿಗೆ ಗುರುಗಳಿಗೆ ಶಲೆಗೆ ಕೀರ್ತಿ ತರಲು ಮಕ್ಕಳಿಗೆ ಹೇಳಿದರು.
ಕಂಟೇಪ್ಪಾ ಧಾನಪ್ಪಾ ಉಪಾಧ್ಯಕ್ಷರು ಬಸವತೀರ್ಥ ವಿದ್ಯಾಪೀಠ ಕೇಂದ್ರ ಸಮಿತಿ ಹುಮನಾಬಾದ ಮಾತನಾಡಿ ನಮ್ಮ ಸಂಸ್ಥೆಯ ಶಾಲೆಯಲ್ಲಿ ಉತ್ತಮ ಅನುಭವಿ ಉತ್ತಮ ಭೋದನೆ ನಡೆಯುತ್ತಿದೆ. ಉತ್ತಮವಾದ ಕಲಿಕೆ ವಾತಾವರಣ ಹೊಂದಿದ್ದು ಮಕ್ಕಳು ಕಲಿಕೆಯಲ್ಲಿ ಆಸಕ್ತಿ ವಹಿಸಿ ಯಶಸ್ಸಿನ ಮೆಟ್ಟಿಲು ಹತ್ತಬೇಕೆಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕುಪ್ಪೆಣ್ಣಾ ಮುಗುಳಿ ಮಕ್ಕಳು ಆದರ್ಶ ಜೀವನ ರೂಪಿಸಿಕೋಳ್ಳಬೇಕು ನಮ್ಮ ಗುರಿ ಸಾಧನೆಗಳಾಗಿ ಸಾಕೆಷ್ಟು ಪರಿಶ್ರಮ ಪಡಬೇಕೆಂದು ತಿಳಿಸಿದರು ಶ್ರೀ ಭೀಮರಾವ್ ಸಿ.ಆರ್.ಪಿ. ಹುಡಗಿ ಮಾತನಾಡಿ
ಈ ಶಾಲೆಯ ಸುಮಾರು ವರ್ಷದಿಂದ 100% ಫಲಿತಾಂಶ ಬರುತ್ತಿದೆ ಈ ವರ್ಷನೂ ಕೂಡ 100% ಫಲಿತಾಂಶ ಬರಲು ಪ್ರಯತ್ನಿಸಲು ತಿಳಿಸಿದರು.
ಕಾಶಿನಾಥ ಕೊಕ್ಸಿ ನಿರ್ದೇಶಕರು ಮಾತನಾಡಿ ಮಕ್ಕಳು ಎಸ್.ಎಸ್.ಎಲ್.ಸಿ ಪರಿಕ್ಷೇಯನ್ನು ನಿರ್ಭಯವಾಗಿ ಎದುರಿಸಿ ಶಾಲೆಯ ಫಲಿತಾಂಶ ಉತ್ತಮ ತರಲು ಪ್ರಯತ್ನಿಸಿದರು ತಿಳಿಸಿದರು
ಕೊನೆಯಲ್ಲಿ ಅಧ್ಯಕ್ಷರು ಮಾತನಾಡಿ ಮಕ್ಕಳ ಜೀವನ ಉತ್ತಮವಾಗಲಿ ಎಂದು ಹರಿಸಿದರು ಕಾರ್ಯಕ್ರಮ ನಿರ್ವಹಣೆಯನ್ನು ದಶರಥ ಪಾರ್ಸನ ನಿರ್ವಹಿಸಿದರು ಸ್ವಾಗತವನ್ನು ಕರುಣಾದೇವಿ ಆನಂದ ಶಿಕ್ಷಕಿ ಮಾಡಿದರೆ ವಚಿದನಾರ್ಪಣೆ ವಿಜಯಕುಮಾರ ಮು.ಗು. ಇದ್ದರು