10 ದಿನ ದುಬೈ – ಭಾರತ ವಿಮಾನ‌ ಸಂಚಾರ ರದ್ದು

ನವದೆಹಲಿ, ಏ.22- ದೇಶದಲ್ಲಿ ಕೊರೋನಾ ಸೋಂಕು ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಮಿರೇಟ್ಸ್ ವಿಮಾನಯಾನ ಸಂಸ್ಥೆ ವಿಮಾನ ಯಾನ ಸಂಚಾರ ರದ್ದು ಮಾಡಿದೆ.

ಭಾನುವಾರದಿಂದ ಅನ್ವಯವಾಗುವಂತೆ ಭಾರತ- ದುಬೈ ನಡುವೆ ವಿಮಾನ ಸಂಚಾರ ರದ್ದು ಮಾಡುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ‌

ಮುಂದಿನ 10 ದಿನಗಳ ಕಾಲ ವಿಮಾನ ಯಾನ‌ ರದ್ದು ‌ಮಾಡಿದೆ.ಯುನೈಟೆಡ್ ಅರಬ್ ಎಮಿರೇಟ್ಸ್ 10 ದಶಲಕ್ಷ ಮಂದಿಗೆ ಲಸಿಕೆ ನೀಡಲು ಅಲ್ಲಿನ‌ ಸರ್ಕಾರ ಉದ್ದೇಶಿಸಿದೆ‌.

ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸುವ ಮುಲಕ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆಯೂ ಸೂಚನೆ ನೀಡಿದೆ.

ಈಗಾಗಲೇ ಇಂಗ್ಲೆಂಡ್ ಭಾರತದಿಂದ ಬರುವ ಮತ್ತು ಹೋಗುವ ಎಲ್ಲಾ ವಿಮಾನಗಳನ್ನು‌ ತಾತ್ಕಾಲಿಕವಾಗಿ ರದ್ದು ಮಾಡಿದೆ. ಅಲ್ಲದೆ ಪ್ರಧಾನಿ ಬೋರೀಸ್ ಜಾನ್ಸನ್ ಅವರೂ ಕೂಡ ಭಾರತ ಪ್ರವಾಸ ರದ್ದು ಮಾಡಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ 5 ಲಕ್ಷಕ್ಕೂ ಅಧಿಕ ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.ಸೌದಿ ಅರಬಿಯಾದಲ್ಲಿ ಅತಿ ಹೆಚ್ಚಿನ ಮಂದಿಗೆ ಸೋಂಕು ಕಾಣಿಸಿಕೊಂಡಿದೆ‌.

ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ದುಬೈ, ಅಬುದಾಬಿ ಸೇರಿದಂತೆ ವಿವಿಧ ನಗರಗಳಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು,ಕೋವಿಡ್ ಮಾರ್ಗಸೂಚಿ ಪಾಲಿಸಬೇಕು ಎಂದು ಅಲ್ಲಿನ ಸರ್ಕಾರ ಜನರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕ್ವಾರಂಟೈನ್:

ಭಾರತದಿಂದ ಪ್ರಾನ್ಸ್ ಗೆ ಬರುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿ ಇರುವಂತೆ ಪ್ರಾನ್ಸ್ ಸೂಚನೆ ನೀಡಿದೆ.14 ದಿನಗಳ ಕಾಲ ಜನರು ಕ್ವಾರಂಟೈನ್ ನಲ್ಲಿ ಇರುವಂತೆಯೂ ನಿರ್ದೇಶನ ನೀಡಲಾಗಿದೆ