10 ದಿನದಲ್ಲಿ ಸುವರ್ಣ ಸಂಭ್ರಮಾಚರಣೆಗೆ ರೂಪುರೇಷೆ ಸಿದ್ಧ:ಶಿವರಾಜ ಎಸ್. ತಂಗಡಗಿ

ಕಲಬುರಗಿ,ಆ.28: ಮೈಸೂರು ರಾಜ್ಯ ಕರ್ನಾಟಕವೆಂದು ನಾಮಕರಣಗೊಂಡು ಇದೇ ನವೆಂಬರ್ 1ಕ್ಕೆ 50 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಸುವರ್ಣ ಸಂಭ್ರಮಾಚರಣೆಗೆ ಮುಂದಿನ 10 ದಿನದಲ್ಲಿ ಅಂತಿಮ ರೂಪುರೇಷೆ ಸಿದ್ದಪಡಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು.
ಸೋಮವಾರ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಅವರು, ನಮ್ಮದು ಜನಪದ ಸರ್ಕಾರ. ಹೀಗಾಗಿಯೇ ಕಲಾವಿದರಿಂದ, ಸಾಹಿತಿ, ಚಿಂತಕರು, ಲೇಖಕರಿಂದ ನೇರವಾಗಿ ಸಲಹೆ ಪಡೆದು ಸುವರ್ಣ ಸಂಭ್ರಮ ಆಚರಣೆಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಈ ಸಂಬಂಧ ಬೆಂಗಳೂರು, ಬೆಳಗಾವಿಯಲ್ಲಿ ಈಗಾಗಲೆ ಸಮಾಲೋಚನೆ ಸಭೆ ನಡೆಸಲಾಗಿದೆ. ಇಂದಿಲ್ಲಿ ಅಭಿಪ್ರಾಯ ಪಡೆಯಲಾಗಿದೆ. ಅಕ್ಟೋಬರ್ 4ಕ್ಕೆ ಮೈಸೂರಿನಲ್ಲಿ ಸಭೆ ನಡೆಸಲಾಗುವುದು. ನಂತರ ಸ್ವೀಕೃತ ಸಲಹೆಗಳನ್ನು ರಾಜ್ಯದ ಪ್ರತಿ ಜಿಲ್ಲೆಯಿಂದ ಕಲಾವಿದರು, ಸಾಹಿತಿಗಳ ಅಧಿಕಾರಿ ಒಳಗೊಂಡ ಸಮಿತಿಯಲ್ಲಿ ಕ್ರೋಢಿಕರಿಸಿ ತದನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರೊಂದಿಗೆ ಚರ್ಚಿಸಿ ಸಂಭ್ರಮಾಚರಣೆಯ ಕಾರ್ಯಕ್ರಮಗಳಿಗೆ ಅಂತಿಮ ರೂಪ ನೀಡಲಾಗುವುದು ಎಂದರು.
ಇಂದಿನ ಸಮಾಲೋಚನಾ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರತಿμÁ್ಠನ ಸ್ಥಾಪಿಸಬೇಕು, ರಾಜ್ಯೋತ್ಸವ ಪ್ರಶಸ್ತಿ ನೀಡುವಲ್ಲಿ ಈ ಭಾಗದವರಿಗೆ ನ್ಯಾಯ ಕಲ್ಪಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಡಾ.ಎಂ.ಎಂ.ಕಲಬುರಗಿ ಪ್ರತಿμÁ್ಟಪನೆಗೆ ನೀಡಲಾಗಿದೆ. ಮುಂದಿನ ದಿನದಲ್ಲಿ ಡಾ.ಸಿದ್ದಯ್ಯ ಪುರಾಣಿಕ ಸೇರಿದಂತೆ ಹಂತ ಹಂತವಾಗಿ ಪ್ರತಿμÁ್ಠನ ಸ್ಥಾಪಿಸಲಾಗುವುದು ಎಂದರು.
ಜಾನಪದ ಕಲೆ ಉಳಿಸಿ ಬೆಳೆಸಲು ಮತ್ತು ಯುವ ಪೀಳಿಗೆಗೆ ಪರಿಚಯಿಸಲು ಕೊಪ್ಪಳ ಜಿಲ್ಲೆಯಲ್ಲಿ 3.50 ಕೋಟಿ ರೂ. ಮೊತ್ತದಲ್ಲಿ ಜಾನಪದ ಲೋಕ ಸ್ಥಾಪನೆಗೆ ಆಯವ್ಯಯದಲ್ಲಿ ಘೋಷಿಸಿದ್ದು, ಇದೇ ವರ್ಷ ಸ್ಥಾಪಿಸಲಾಗುವುದು ಎಂದು ಸಚಿವ ಶಿವರಾಜ್ ಎಸ್. ತಂಗಡಗಿ ಮಾಹಿತಿ ನೀಡಿದರು.
ಸರೋಜಿನಿ ಮಹಿಷಿ ವರದಿಯಂತೆ ಖಾಸಗಿ ಶಾಲೆಯಲ್ಲಿ ಕನ್ನಡ ಕಲಿಕೆ ಕಡ್ಡಾಯ ಬೋಧನೆಗೆ ಒಂದು ವಾರದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಇದಕ್ಕೆ ನೀತಿ ನಿಯಮಗಳನ್ನು ಅಂತಿಮ ಗೊಳಿಸಲಾಗುವುದು ಎಂದರು.
ನವೆಂಬರ್ 1 ರಂದು ರಾಷ್ಟ್ರಧ್ವಜ ಜೊತೆಗೆ ನಾಡ ಧ್ವಜ ಹಾರಾಟಕ್ಕೆ ಅನುಮತಿ ನೀಡಲು ಕೇಂದ್ರಕ್ಕೆ ಪತ್ರ ಮತ್ತು ಧ್ವಜದ ಮಾದರಿ ಕಳುಹಿಸಲಾಗಿದೆ. ಅಲ್ಲಿಂದ ಅನುಮತಿ ಬಂದಲ್ಲಿ ನಾಡ ಧ್ವಜ ಹಾರಿಸಲಾಗುವುದು ಎಂದರು.
5-6 ಕಡೆ ಉತ್ಸವ ಆಯೋಜನೆ: 2018 ರಲ್ಲಿ ನಿಮ್ಮ ಸರ್ಕಾರದ ಅವಧಿಯಲ್ಕಿ ರಾಷ್ಟ್ರಕೂಟ ಉತ್ಸವ ಆಯೋಜಿಸಲಾಗಿತ್ತು, ನಂತರ ಸ್ಘಗಿತಗೊಂಡಿದೆ ಎಂದು ಸಚಿವರನ್ನು ಪತ್ರಕರ್ತರು ಗಮನ ಸೆಳೆದಾಗ, ನಮ್ಮ ಸರ್ಕಾರ ಈ ವರ್ಷ 5-6 ಕಡೆ ಉತ್ಸವ ಅಯೋಜಿಸುವ ಚಿಂತನೆ ನಡೆದಿದೆ. ಇಲಾಖೆಗೆ 247 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದು, ಅನುದಾನಕ್ಕೆ ಕೊರತೆ ಇಲ್ಲ ಎಂದು ಸಚಿವ ಶಿವರಾಜ್ ಎಸ್. ತಂಗಡಗಿ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಖತಿ ಇಲಾಖೆಯ ನಿರ್ದೇಶಕ ಡಾ.ವಿಶ್ವನಾಥ ಹಿರೇಮಠ, ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರ, ಸಚಿವರ ಆಪ್ತ ಕಾರ್ಯದರ್ಶಿ ಜಿ.ಎಸ್.ಮಧೂಸೂಧನ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ ಇದ್ದರು.