10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ

ಕಲಬುರಗಿ:ಫೆ.6:ಸಮಾಜ ಕಲ್ಯಾಣ ಇಲಾಖೆ, ಬೇಂಗಳೂರು, ಕೈಗಾರಿಕಾ ಮತು ವಾಣಿಜ್ಯ ಇಲಾಖೆ, ಬೆಂಗಳೂರು ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಕಲಬುರಗಿ ಇವರ ಸಹಯೋಗದಲ್ಲಿ 2023-24ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಡಾ. ಗಣಪತಿ ರಾಠೂಡ, Pಡಿesiಜeಟಿಣ, Sಅ & Sಖಿ ಇಟಿಣಡಿeಠಿಡಿeಟಿeuಡಿs ಂssoಛಿiಚಿಣioಟಿ, ಕಲಬುರಗಿ ಉದ್ಘಾಟಿಸಿ ಮಾತನಾಡುತ್ತ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ವಿಶೇಷ ಮಿಸಾಲಾತಿ ಬಳಸಿಕೊಂಡು, ಉದ್ಯಮ ಮಾಡಲು ಸರ್ಕಾರದಿಂದ ಅನೇಕ ಯೋಜನೆಗಳು ಇರುತ್ತವೆ ಅದನ್ನು ಸರಿಯಾದ ಆಯ್ಕೆಗಳನ್ನು ಮಾಡಿಕೊಂಡು ಆ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡಿದರೆ ನಿಮ್ಮ ನಿರ್ದಿಷ್ಟವಾದ ಗುರಿ ವiತ್ತು ಉದ್ದೇಶಗಳನ್ನು ಇಟ್ಟು ಅದರ ಪೂರÀಕವಾಗಿ ಕೆಲಸ ಮಾಡಿಕೊಂಡುÀ ಯಶಸ್ವಿಯಾಗಲು ಸಾಧ್ಯ ಎಂದು ಮಾತನಾಡಿದರು.

ಕಾರ್ಯಕ್ರಮದ ಅದ್ಯಕ್ಷರಾದ ಶ್ರೀ. ಸತೀಶ ಕುಮಾರ, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕಲಬುರಗಿ ಅವರು ಸರಕಾರದಿಂದ ಎಲ್ಲರಿಗೊ ಸರಕಾರಿ ಉದ್ಯೋಗ ನಿಡಲು ಸಾದ್ಯವಿಲ್ಲ ಹಾಗಾಗಿ ಉಳಿದವರು ಇಂತಹ ತರಬೇತಿ ಕಾರ್ಯಕ್ರಮಗಳ ಮೊಲಕ ಒಳ್ಳೆಯ ಉದ್ಯಮಶೀಲರಾಗಬಹುದು ಹಾಗೊ ನಿರಂತರ ಶ್ರಮದ ಮೊಲಕ ಯಶಸ್ವಿಯಾಗಲು ಸಾದ್ಯ ಎಂದು ಹೇಳಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ. ಬಸವರಾಜ ಕಣಮೂಶ, ಸಹಾಯಕ ನಿರ್ದೇಶಕರು, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ (ವಿಭಾಗೀಯ ಕಛೇರಿ), ಕಲಬುರಗಿ ಅವರು ಹೆಚ್ಚು ಒತ್ತು ಕೊಟ್ಟು ಉದ್ಯಮ ಮಾಡಬಹುದು ಹಾಗೊ ಯಾವುದೇ ಕೆಲಸ ಮಾಡಬೇಕಾದರೆ ಮೊದಲು ಮನಸ್ಸು ಮಾಡಬೇಕು. ಮನಸ್ಸಿದ್ದರೆ ಮಾರ್ಗ ಎಂದು ಕರೆ ಕೊಟ್ಟಿದರು,

ಶ್ರೀ. ಸೈಯದ್ ಆಷ್ಫಕ್ ಅಹ್ಮದ, ಫ್ಯಾಕಲ್ಟೀ & ಕನ್ಸ್‍ಲ್ಟಂಟ್, ಸಿಡಾಕ್, ಕಲಬುರಗಿ ಇವರು 10 ದಿನಗಳ ಅವಧಿಯ ತರಬೇತಿಯಲ್ಲಿ ಸಾಧನಾ ಪ್ರೇರಣಾ ತರಬೇತಿ, ಸ್ವಯಂ ಉದ್ಯಮಗಳ ಸ್ಥಾಪನೆ ಮಾಡುವ ವಿಧಾನ, ಸ್ವಯಂ ಉದ್ಯೋಗಕ್ಕೆ ಇರುವ ಸೌಲಭ್ಯಗಳ ಕುರಿತು ಮಾಹಿತಿ, ಉದ್ದಿಮೆಯನ್ನು ಆಯ್ಕೆ ಮಾಡುವ ವಿಧಾನ, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಸಮೀಕ್ಷೆ ಮಾಡುವ ವಿಧಾನ, ಬ್ಯಾಂಕ್ ವ್ಯವಹಾರಗಳು, ಉದ್ಯಮ ಸ್ಥಾಪನೆಗೆ ಇರುವ ಸಾಲ ಸೌಲಭ್ಯಗಳು ಮತ್ತು ಇತರ ಸಂಬಂಧಪಟ್ಟ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವದು ಎಂದು ತಿಳಿಸಿದರು. ಶ್ರೀ. ನೌಷದ ಅಲಿ, ತರಬೇತಿದಾರರು, ಸಿಡಾಕ್, ಕಲಬುರಗಿ ಅವರು ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಹಾಗೂ ವಂದಿಸಿದರು. ಸಿಬ್ಬಂದಿ ವರ್ಗದವರು ಮತ್ತು ಇನ್ನಿತರೆ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದರು.