10 ಕೋಟಿ ರೂ. ಮೊತ್ತದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡಕ್ಕೆ ಅಡಿಗಲ್ಲು: ಎಂವೈ

ಅಫಜಲಪುರ :ಜು.26:ತಾಲೂಕಿನ ಬಡದಾಳ ಗ್ರಾಮದಲ್ಲಿ 10 ಕೋಟಿ ವೆಚ್ಚದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡಕ್ಕೆ ಅಡಿಗಲ್ಲುವನ್ನು ಶಾಸಕ ಎಂ.ವೈ ಪಾಟೀಲ ನೆರವೇರಿಸಿದರು

ಸರ್ಕಾರಿ ಕಟ್ಟಡಗಳು, ಕೆಲಸಗಳು ತಿಂಗಳಿಗೊಮ್ಮೆ ಬರುವುದಿಲ್ಲ. ಅವುಗಳು ಬಂದಾಗ ಗ್ರಾ.ಪಂ ಅದ್ಯಕ್ಷರು, ಸದಸ್ಯರು, ಗ್ರಾಮಸ್ಥರು ತಮಗೇನು ಸಂಬಂಧವಿಲ್ಲ ಎನ್ನುವಂತೆ ವರ್ತಿಸಬಾರದು, ಬದಲಾಗಿ ಮುಂದೆ ನಿಂತು ನೀಲನಕ್ಷೆಯಂತೆ ಮತ್ತು ಗುಣಮಟ್ಟದ ಕೆಲಸ ಮಾಡಿಸಿಕೊಳ್ಳಬೇಕು.

ಈಗ ನಿರ್ಮಾಣವಾಗುತ್ತಿರುವ 10 ಕೋಟಿಯ ವಸತಿ ಶಾಲೆ ಸಣ್ಣ ಪ್ರಮಾಣದ್ದಲ್ಲ. ಹೀಗಾಗಿ ಈ ಕಟ್ಟಡವನ್ನು ಎಲ್ಲರೂ ಕೂಡಿ ಗುಣಮಟ್ಟದಿಂದ ಕಟ್ಟಿಸಿ ನೂರಾರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಮಾಡುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಇನ್ನೂ ಬಡದಾಳ ಗ್ರಾಮದಿಂದ ಅರ್ಜುಣಗಿ ಸಂಪರ್ಕ ರಸ್ತೆಯನ್ನು 2 ಕೋಟಿ 70 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ, ಬಡದಾಳದಿಂದ ಬಳೂರ್ಗಿ ಸಂಪರ್ಕ ರಸ್ತೆಯನ್ನು 2 ಕೋಟಿ 44 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

ಅಲ್ಲದೆ ಚನ್ನಮಲ್ಲೇಶ್ವರ ಮಠದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 1.5 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಒಟ್ಟಾರೆ ಗ್ರಾಮದ ಸವಾರ್ಂಗೀಣ ಅಭಿವೃದ್ದಿಗೆ ನಾನು ಬದ್ದನಾಗಿದ್ದು ಗ್ರಾಮಸ್ಥರು ನನ್ನ ಬಳಿ ಗ್ರಾಮದ ಯಾವುದೇ ಸಮಸ್ಯೆ ಹೇಳಿಕೊಂಡು ಬಂದರೆ ಅದನ್ನು ತಕ್ಷಣಕ್ಕೆ ಆದರೆ ತಕ್ಷಣಕ್ಕೆ ಇಲ್ಲವಾದರೆ ಸ್ವಲ್ಪ ಸಮಯ ತೆಗೆದುಕೊಂಡಾದರೂ ಸರಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಶಾಲೆಯ ಪ್ರಾಂಶುಪಾಲ ಶಿವಾನಂದ ಎನ್.ಟಿ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ವಸತಿ ಶಾಲೆಗೆ ಸ್ವಂತ ಕಟ್ಟಡವಿಲ್ಲದಿದ್ದರೂ ಕೂಡ ನಾವು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಿಂದೆ ಬಿದ್ದಿಲ್ಲ ಹೀಗಾಗಿ ನಮ್ಮ ಶಾಲೆಯ ವಿದ್ಯಾರ್ಥಿಗಳು 10ನೇ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶದೊಂದಿಗೆ ಪಾಸಾಗಿದ್ದಾರೆ.

ಪ್ರಸಕ್ತ ವರ್ಷದಲ್ಲಿ 44 ವಿದ್ಯಾರ್ಥಿಗಳ ಪೈಕಿ 22 ವಿದ್ಯಾರ್ಥಿಗಳು ಡಿಸ್ಟಿಂಕ್ಷ???ನಲ್ಲಿ ಪಾಸಾದರೆ 22 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ಶಾಲೆಯ ಗೌರವ ಹೆಚ್ಚಿಸಿದ್ದಾರೆ.

ಸಧ್ಯ ತಾಲೂಕಿನಲ್ಲಿ 5ನೇ ಸ್ಥಾನದಲ್ಲಿರುವ ನಮ್ಮ ಶಾಲೆಯನ್ನು ಸ್ವಂತ ಕಟ್ಟಡವಾದ ಬಳಿಕ ಮೊದಲ ಸ್ಥಾನಕ್ಕೆ ತರುವ ಕೆಲಸ ಮಾಡುತ್ತೇವೆ. ಆದಷ್ಟು ಬೇಗ ಕಟ್ಟಡ ಪೂರ್ಣಗೊಂಡರೆ ಅನುಕೂಲವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಅಮೃತ ಮಾತಾರಿ, ಸದಸ್ಯರಾದ ಖಾಜಪ್ಪ ಸಿಂಗೆ, ಮುಖಂಡರಾದ ಶ್ರೀಕಾಂತ ನಿಂಬಾಳ, ಸಿದ್ದಾರ್ಥ ಬಸರಿಗಿಡ, ಪ್ರಕಾಶ ಜಮಾದಾರ, ಶಿವಾನಂದ ಗಾಡಿಸಾಹುಕಾರ, ಗುತ್ತಿಗೆದಾರ ಗೋಲಯ್ಯ ಹಿರೇಮಠ, ಗುರು ಸಾಲಿಮಠ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಭಕ್ತ ಮಾಕರ್ಂಡೇಯ, ತಾಲೂಕು ಅಧಿಕಾರಿ ಶರಣಬಸಪ್ಪ ಪಾಟೀಲ್ ಸೇರಿದಂತೆ ಅನೇಕರು ಇದ್ದರು.