10 ಕೋಟಿ ರೂಗಳ ವಕೀಲರ ಸಂಘದ ಕಟ್ಟಡಕ್ಕೆ ಶಾಸಕರಿಂದ ಭೂಮಿ ಪೂಜೆ

ಬಳ್ಳಾರಿ, ನ.18: ನಗರದ ತಾಳೂರು‌ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಲೋಕೋಒಯೋಗಿ ಇಲಾಖೆಯಿಂದ ನಿರ್ಮಾಣ ಮಾಡುವ ವಕೀಲರ ಸಂಘದ ಜಿ ಪ್ಲಸ್ ಟು ಕಟ್ಟಡಕ್ಕೆ ಇಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.
ಈ ಕಟ್ಟಡ ಕಾಮಗಾರಿ‌ಬೇಗನೆ ಪೂರ್ಣಗೊಂಡು ವಕೀಲರಿಗೂ ಕಕ್ಷಿದಾರರಿಗೂ ಸಹಕಾರಿಯಾಗಲಿ ಎಂದರು. ಈ ಕಟ್ಟಡ ನೆಲ ಮತ್ತು ಎರೆಡು ಅತಂಸ್ತು ಹೊಂದಲಿದ್ದು.
ನೆಲ ಮಹಡಿಯಲ್ಲಿ ಕ್ಯಾಂಟೀನ್, ಪೋಸ್ಟ್ ಆಫೀಸ್ ಬ್ಯಾಂಕ್, ಟೈಪಿಂಗ್ ಪೂಲ್ ಮೊದಲಾದವು ಬರಲಿದ್ದು. ಮೊದಲ ಮಹಡಿಯಲ್ಲಿ 100 ಜನರು ಕುಳಿತುಕೊಳ್ಳುವ ಹವಾನಿಯಂತ್ರಿತ ಸಭಾಂಗಣ ಇರಲಿದೆ.
ಎರಡನೇ ಮಹಡಿ ಪುರುಷ ಮತ್ತು‌ ಮಹಿಳೆಯರ ವಕೀಲರ ಕೊಠಡಿಗಳು ಬರಲಿವೆ.
ಜೊತೆಗೆ ಲಿಫ್ಟ್ ಸಹ ಇರಲಿದೆ.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಹೆಚ್.ಎಂ.ಅಂಕಲಯ್ಯ, ಖಜಾಂಚಿ ಕೆ. ತಿಪ್ಪೇರುದ್ರಪ್ಪ, ಉಪಾಧ್ಯಕ್ಷ ಅಬ್ದುಲ್ ಮಾಜೀದ್, ಜಂಟಿ ಕಾರ್ಯದರ್ಶಿ ಪುಷ್ಪಲತ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಅನುರಾಧ, ಬಾವಿಕಟ್ಟೆ ನಾಗಭೂಷಣ, ವಕೀಲ ಬಿ.ಪಾಲ ಪಕ್ಕೀರಪ್ಪ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗದೇವ್ ಮೊದಲಾದವರು ಇದ್ದರು.