10 ಕೋಟಿ ಡೋಸ್ ಕೋವ್ಯಾಕ್ಸಿನ್ ಉತ್ಪಾದನೆ

ನವದೆಹಲಿ,ಮೇ ೨೦-ದೇಶದಲ್ಲಿ ಕೊರೊನಾ ಸೋಂಕಿನ ಲಸಿಕೆ ಅಭಾವ ಎದುರಾಗಿರುವ ಹಿನ್ನೆಲೆಯಲ್ಲಿ ಲಸಿಕೆ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಸೆಪ್ಟಂಬರ್ ಅಂತ್ಯದ ವೇಳೆಗೆ ಪ್ರತಿ ತಿಂಗಳಿಗೆ ೧೦ ಕೋಟಿಗೂ ಅಧಿಕ ಡೋಸ್ ಕೋವಾಕ್ಸಿನ್ ಲಸಿಕೆ ಉತ್ಪಾದನೆ ಮಾಡುವ ಸಾಮಥ್ರ್ಯ ಹೊಂದಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಸದ್ಯ ದೇಶದಲ್ಲಿ ಕೊವಾಕ್ಸಿನ್ ಲಸಿಕೆ ಉತ್ಪಾದನೆಯ ಪ್ರಮಾಣವನ್ನು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ದ್ವಿಗುಣ ಮಾಡಲಾಗುವುದು .ಏಪ್ರಿಲ್ ನಲ್ಲಿ ೧ ಕೋಟಿ ಡೋಸ್ ಪ್ರತಿ ತಿಂಗಳು ಉತ್ಪಾದನೆ ಮಾಡಲಾಗುತ್ತಿದೆ. ಜುಲೈ- ಆಗಸ್ಟ್ ನಲ್ಲಿ ಈ ಪ್ರಮಾಣ ೬ ರಿಂದ ೭ ಕೋಟಿ ತಲುಪಲಿದೆ ಅಲ್ಲದೆ ಸೆಪ್ಟಂಬರ್ ತಿಂಗಳ ವೇಳೆಗೆ ಪ್ರತಿ ತಿಂಗಳು ೧೦ ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದೆ.
ಮೇ ತಿಂಗಳಲ್ಲಿ ಹೆಚ್ಚುವರಿಯಾಗಿ ೨೧,೫೪,೪೪೦ ಡೋಸ್ ಕೊವಾಕ್ಸಿನ್ ಸರಬರಾಜು ಮಾಡಲಾಗಿದೆ.ಒಟ್ಟಾರೆ ಇಲ್ಲಿಯ ತನಕ ೩,೧೧,೮೭,೦೬೦ ಡೋಸ್ ಲಸಿಕೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪೂರೈಕೆ ಮಾಡಲಾಗಿದೆ ಎಂದು ಸಚಿವಾಲಯ ತನ್ನ ಮಾಹಿತಿಯಲ್ಲಿ ತಿಳಿಸಿದೆ.
ಸ್ಪಷ್ಟನೆ;
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಸದ್ಯ ಪ್ರತಿತಿಂಗಳು ೬ ಕೋಟಿ ಡೋಸ್ ಲಸಿಕೆ ಉತ್ಪಾದನೆ ಮಾಡಲಾಗುತ್ತಿದೆ ಎನ್ನವು ಬಗ್ಗೆ ಹರಡಿರುವ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ.ಲಸಿಕೆ ಅಭಾವವಿರುವ ಹಿನ್ನೆಲೆಯಲ್ಲಿ ಹೆಚ್ಚು ಲಸಿಕೆ ಉತ್ಪಾದನೆಗೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ.