10ರವರೆಗೆ ಕಾಲುವೆಗೆ ನೀರು ಹರಿಸಲು ಮನವಿ

ಶಹಾಪುರ:ಎ.2:ಅತಿ ಹೆಚ್ಚು ಮುಂಗಾರು ಮಳೆಯಾಗಿ ಸಂಪೂರ್ಣ ಬೆಳೆ ಕೈಗೆ ಬರದೆ ನಷ್ಠಕ್ಕಿಡಾಗಿದ್ದ ರೈತರು ಕಾಲುವೆ ನೀರು ಬರುತ್ತೆನುವ ನಂಬಿಕೆಯಿಂದ ಸಾಲ ಸೂಲ ಮಾಡಿ ಹಿಂಗಾರು ಬಿತ್ತನೆ ಮಾಡಿದ್ದು ಫಸಲು ಬರಲು ಕನಿಷ್ಟ ಅವಧಿಗಳು ಬೇಕಾಗಿದ್ದ ಈ ಸಮಯದಲ್ಲಿ ಕಾಲುವೆಗೆ ನೀರು ಸ್ಥಗಿತಗೊಳ್ಳಬಹುದು ಎಂಬ ಆತಂಕ ರೈತರಲ್ಲಿ ಮನೆ ಮಾಡಿದ್ದು. ನೀರು ಸ್ಥಗಿತಗೊಂಡಲ್ಲಿ ರೈತರ ಬೇಳೆ ಒಣಗಿ ಲಕ್ಷಾಂತರ ರೂ ಮೌಲ್ಯದ ಬೇಳೆ ನಾಶವಾಗುತ್ತದೆ. ಈ ದಿಸೆಯಲ್ಲಿ ಸರ್ಕಾರ ರೈತರ ಹೀತಾಸಕ್ತಿಯನ್ನು ಪರಿಗಣೆಗೆ ತೆಗೆದುಕೊಂಡು ಏಪ್ರಿಲ್ 10ರವರೆಗೆ ಕಾಲುವೆ ನೀರು ಸಪಮರ್ಕವಾಗಿ ಹರಿಸಿದಲ್ಲಿ ರೈತರು ನೆಮ್ಮದಿಯಾಗುತ್ತಾರೆ. ಈ ಕುರಿತು ಸರ್ಕಾರ ತುರ್ತು ಕ್ರಮಕ್ಕೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪಧಾಧಿಕಾರಿಗಳು ಆಗ್ರಹಿಸಿದರು.

ಭೀಮರಾಯನಗುಡಿಯ ಕೃಷ್ಣ ಭಾಗ್ಯ ಜಲ ನಿಗಮ ಮುಖ್ಯ ಇಂಜಿನಿಯರ್‍ರವರ ಮುಖಾಂತರ ವ್ಯವಸ್ಥಾಪಕ ನಿರ್ಧೇಶಕರಿಗೆ ಮನವಿಯನ್ನು ಸಲ್ಲಿಸಿದರು.

ಇದೇ ಸಂಧರ್ಭದಲ್ಲಿ ಸಂಘದ ಕಲಬುರ್ಗಿ ವಿಭಾಗೀಯ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸತ್ಯಂಪೇಟ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ಪಾಟಿಲ, ಜಿಲ್ಲಾ ಅಧ್ಯಕ್ಷರಾದ ಶರಣು ಬಂದರವಾಡ, ಪ್ರಧಾನ ಕಾರ್ಯದರ್ಶಿಗಳಾದ ಎಸ್.ಎಮ್. ಸಾಗರ, ತಾಲೂಕು ಅಧ್ಯಕ್ಷರಾದ ಮಲಕಣ್ಣ ಚಿಂತಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಚಂದ್ರಕಲಾ, ಬಾಗೋರ. ಶಂಕರನಾಯ್ಕ, ಜಾದವ್ ಸೇರಿದಂತೆ ಇತರÀರು ಇದ್ದರು.