ಕಲಬುರಗಿ,ಜು. 16: ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಸಂಭ್ರಮದ ನಿಮಿತ್ಯ 10ನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವು ವಿಜಯಪುರದ ಕೆಂಗಲ್ ಹನುಮಂತರಾಯ್ ರಂಗಮಂದಿರದಲ್ಲಿ ಜುಲೈ 29 ಹಾಗೂ 30ರಂದು ಜರುಗಲಿದೆ ಎಂದು ರಾಜ್ಯ ದಲಿತ ಸಾಹಿತ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಅರ್ಜುನ್ ಗೊಳಸಂಗಿ ಅವರು ಹೇಳಿದರು.
ಶನಿವಾರ ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಈ ಸಮ್ಮೇಳನದಲ್ಲಿ ರಾಜ್ಯದ 31 ಜಿಲ್ಲೆಗಳಿಂದ ದಲಿತ ಸಾಹಿತ್ಯ -ಸಂಸ್ಕøತಿ-ಸಂಘಟನೆಯ ಕ್ಷೇತ್ರದ ಸಾಧನೆಯಲ್ಲಿ ತೊಡಗಿಕೊಂಡ ನೂರಾರು ಹಿರಿಯ ಮತ್ತು ಯುವ ಸಾಹಿತಿಗಳು ಹಾಗೂ ಪ್ರತಿನಿಧಿಗಳು ಸ್ಥಳೀಯ ಸಾಹಿತಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸುವರು. ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈ ಸಮ್ಮೇಳನದಲ್ಲಿ 25 ಜನ ದಲಿತ ಸಾಹಿತಿಗಳಿಗೆ ‘ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿ’ ಹಾಗೂ ದಲಿತ ಲೋಕದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೂ ಬೆಳ್ಳಿ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಸಮ್ಮೇಳನದ ಪ್ರಮುಖ ಆಶಯ ‘ಪ್ರಬುದ್ದ ಭಾರತ.’ ಪ್ರಬುದ್ದ ಭಾರತ ಕುರಿತ ಉಪನ್ಯಾಸ-ಸಂವಾದ, ನಮ್ಮ ಸಂವಿಧಾನ ನಮ್ಮ ರಕ್ಷಣೆ ಸಂವಾದ ನಡೆಸಲಾಗುವುದು. ದಲಿತ ಸಾಹಿತ್ಯ ಕುರಿತ ಒಂದು ಗೋಷ್ಠಿ, ಮತ್ತು ಎರಡು ಕವಿಗೋಷ್ಠಿಗಳನ್ನು ಏರ್ಪಡಿಸಲಾಗುವುದು. ಸಮಾರೋಪ ಸಮಾರಂಭದಲ್ಲಿ ನಾಡಿನ ಸಾಧಕರನ್ನು ಸನ್ಮಾನಿಸಲಾಗುವುದು. ಎರಡೂ ದಿನ ಸಾಂಸ್ಕøತಿಕ ಕಾರ್ಯಕ್ರಮಗಳೂ ಕೂಡಾ ನಡೆಯುತ್ತವೆÉ. ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ಸಂವಿಧಾನ ಪುಸ್ತಕಗಳ ಮೆರವಣಿಗೆ ಪ್ರಮುಖವಾಗಿರುತ್ತದೆ. ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ- ಮಾರಾಟ ವ್ಯವಸ್ಥೆಯನ್ನು ಮಾಡಲಾಗುವುದು. ಸಮ್ಮೇಳನಕ್ಕೆ ಬರುವ ಅತಿಥಿ ಹಾಗೂ ಪ್ರತಿನಿಧಿಗಳಿಗೆ ಸ್ಥಳ್ಳೀಯ ವಿವಿಧ ಲಾಡ್ಜಿಂಗ್ ಗಳಲ್ಲಿ ವ್ಯವಸ್ಠೆ ಮಾಡಲಾಗುವುದು ಎಂದು ಅವರು ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕನ್ನಡ ಹಾಗೂ ದಲಿತ ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿರುವ ಸಾಹಿತಿ, ಕರ್ನಾಟಕದಲ್ಲಿ ಭಗವಾನ್ ಬುದ್ದ ಹಾಗೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತು ಅಧೀಕೃತವಾಗಿ ಮಾತನಾಡುವ ಚಿಂತಕರೂ, ಜಾನಪದ ವಿದ್ವಾಂಸರು, ಕಲಬುರ್ಗಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರು ಮತ್ತು ಇದೇ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದವರಾದ ಡಾ. ಎಚ್.ಟಿ. ಪೋತೆ ಅವರನ್ನು ದಲಿತ ಹಾಗೂ ದಲಿತ ಪರ ಸಾಹಿತಿ – ಸಂಘಟಿಕರ ಅಭಿಪ್ರಾಯಗಳನ್ನು ಸಂಕಲಿಸಿ, ಪರಿಷತ್ ರಾಜ್ಯ ಕಾರ್ಯಕಾರಿ ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದು ಅವರು ತಿಳಿಸಿದರು.
ಗೌರವ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದ ಬೆಂಗಳೂರಿನ ಆರ್. ದೊಡ್ಡೇಗೌಡ, ರಾಯಚೂರಿನ ವೀರಹನುಮಾನ್, ಕಲಬುರ್ಗಿಯ ಡಾ. ಶ್ರೀಶೈಲ್ ನಾಗರಾಳ್, ಹುಮ್ನಾಬಾದ್‍ನ ಡಾ. ಗವಿಸಿದ್ದಪ್ಪ ಪಾಟೀಲ್, ಇಳಕಲ್‍ನ ಶ್ರೀಮತಿ ಮುರ್ತುಜಾಬೇಗಂ ಕೊಡಗಲಿ, ಮೈಸೂರಿನ ಹಾರೋಹಳ್ಳಿ ರವೀಂದ್ರ, ವಿಜಯಪುರದ ಪರಶುರಾಮ್, ಸಮಾಜ ಸೇವೆಗಾಗಿ ಮೈಸೂ<ರಿನ ನರೇಂದ್ರ ನಾಗವಾಲ್, ದಲಿತ ಚಳುವಳಿಗಾಗಿ ಚಾಮರಾಜನಗರದ ಮುಳ್ಳೂರು ಶಿವಮಲ್ಲು, ಪತ್ರಿಕಾ ರಂಗದಿಂದ ಧಾರವಾಡದ ಡಾ. ಸಂಜೀವಕುಮಾರ್ ಮಾಲಗತ್ತಿ, ಹುಬ್ಬಳ್ಳಿಯ ರಾಜು ವಿಜಯಪುರ, ಚಿತ್ರಕಲಾ ಕ್ಷೇತ್ರದಲ್ಲಿ ಧಾರವಾಡದ ಕು. ಸೌಜನ್ಯ ಕರಡೋಣಿ, ಸಂಗೀತ ಕ್ಷೇತ್ರದಲ್ಲಿ ಕೋಲಾರ್‍ದ ಸಿ.ಆರ್. ನಟರಾಜ್, ಚಲನಚಿತ್ರರಂಗದಿಂದ ವಿಜಯಪುರದ ದೇವು ಕೆ., ಅಂಬಿಗ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು.
ಅದೇ ರೀತಿ ಬೆಳ್ಳಿ ಸಂಭ್ರಮ ಪುಸ್ತಕ ಪ್ರಶಸ್ತಿಗಳನ್ನು ಸಹ ಪ್ರದಾನ ಮಾಡಲಾಗುವುದು. ಸಾಧಕ ಶ್ರೀ ಪ್ರಶಸ್ತಿಯನ್ನು ಗದಗದ ಗಣಪತಿ ಚಲವಾದಿ, ರಾಯಚೂರಿನ ತಾಯರಾಜ್ ಮರ್ಚಟಹಾಳ್, ಸಿಂಧನೂರಿನ ಹುಸೇನಪ್ಪ ಅಮರಾಪೂರ್ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು. ಸುದ್ದಿಗೋಷಠಿಯಲ್ಲಿ ಡಾ. ವೈಎಂ. ಭಜಂತ್ರಿ, ಡಾ. ಎಚ್.ಬಿ. ಕೋಲಕರ್, ಡಾ. ಸುಜಾತಾ ಚಲವಾದಿ, ಬಸವರಾಜ್ ಜಾಲವಾದಿ, ಡಾ. ಗಾಂಧೀಜಿ ಮೊಳಕೇರಿ, ಡಾ. ಸುನೀಲ್ ಜಾಬಾದಿ, ಡಾ. ಪೀರಪ್ಪ ಸಜ್ಜನ್, ಅನಿಲ್ ಹೊಸಮನಿ, ಶ್ರೀನಾಥ್ ಪೂಜಾರ್ ಮುಂತಾದವರು ಉಪಸ್ಥಿತರಿದ್ದರು.