1.77 ಕೋಟಿ ರೂ ವೆಚ್ಚದ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.26: ನಗರದ ಸಂಗನಕಲ್ಲು ರಸ್ತೆಯ 21 ವಾರ್ಡಿನ ತಿರುಮಲ ನಗರದಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಇಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಚಾಲನೆ ನೀಡಿದರು. ಪಾಲಿಕೆ ಸದಸ್ಯೆ ಸುರೇಖ ಮಲ್ಲನಗೌಡ ಮೊದಲಾದವರು ಇದ್ದರು.
ಈ ಕಾಮಗಾರಿಯನ್ನು ಒಂದು ಕೋಟಿ 77 ಲಕ್ಷ ರೂ ವೆಚ್ಚದಿಂದ ಕೈಗೊಳ್ಳಲಾಗುತ್ತಿದೆ.