1.70 ಕೋ. ವೆಚ್ಚದಲ್ಲಿ ಅಣೆಕಟ್ಟು ನಿರ್ಮಾಣಜನತೆಯ ಆಶಯದಂತೆ ಕಾರ್ಯನಿರ್ವಹಣೆ:ಶಾಸಕ ಸುಭಾಷ್ ಆರ್ ಗುತ್ತೇದಾರ

ಕಲಬುರಗಿ:ಮಾ.26:ಅಧಿಕಾರಕ್ಕೆ ಬಂದ ದಿನದಿಂದಲೂ ಮತಕ್ಷೇತ್ರದ ಜನತೆಯ ಆಶಯದಂತೆ ಕಾರ್ಯನಿರ್ವಹಿಸಿದ್ದೇನೆ ಈಗಲೂ ಪ್ರತಿದಿನ ಜನರ ಅಹವಾಲು ಆಲಿಸಲು ಹೆಚ್ಚಿನ ಸಮಯ ನೀಡುತ್ತಿದ್ದೇನೆ ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.

ತಾಲೂಕಿನ ತೀರ್ಥ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಮಂಜೂರಾದ ಅಣೆಕಟ್ಟು ನಿರ್ಮಾ ಕಾಮಗಾರಿಗೆ ಗುದ್ದುಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದರು.

ಕೇಂದ್ರ ಸರ್ಕಾರದಿಂದ ರೈತರು, ಕಾರ್ಮಿಕರು ಮತ್ತು ಮಹಿಳೆಯರಿಗಾಗಿ ಹಲವಾರು ಇಲಾಖೆಯ ಮೂಲಕ ಸೌಲಭ್ಯಗಳನ್ನು ಒದಗಿಸುತ್ತಿದೆ ಜನರು ಇಲಾಖೆಯನ್ನು ಸಂಪರ್ಕಿಸಿ ಲಾಭವನ್ನು ಪಡೆದುಕೊಳ್ಳಬೇಕು. ಗ್ರಾಮೀಣ ಜನರ ಜೀವನ ಮಟ್ಟ ಸುಧಾರಣೆಗಾಗಿ ಶಿಕ್ಷಣ, ಕುಡಿಯುವ ನೀರು, ರಸ್ತೆ ಸೇರಿದಂತೆ ಕೃಷಿ ಕಾರ್ಮಿಕರು, ರೈತರ ಮತ್ತು ಕೃಷಿಗೆ ಪೂರಕವಾಗುವ ನಿಟ್ಟಿನಲ್ಲಿ ಯೋಜನೆ ಮತ್ತು ಸೌಲಭ್ಯಗಳನ್ನು ಸರ್ಕಾರ ಅನುಷ್ಠಾನಕ್ಕೆ ಮುಂದಾಗಿದ್ದು ಅರ್ಜಿ ಸಲ್ಲಿಸಿ ಸೌಲಭ್ಯಗಳನ್ನು ಪಡೆದು ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದು ಎಂದು ಸಲಹೆ ನೀಡಿದರು.

ಚುನಾವಣೆ ಪೂರ್ವ ನೀಡಿದ ಭರವಸೆಗಳನ್ನು ತೀರ್ಥ ಗ್ರಾಮ ಸೇರಿ ಹಲವಡೆ ಕಾಮಗಾರಿಗಳ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುತ್ತಿದೆ. ಒಂದು ಕಾಮಗಾರಿ ಮಾಡಿದ ಮೇಲೆ ಅಭಿವೃದ್ಧಿ ಮುಗಿಯುವುದಿಲ್ಲ. ಜನರ ಬೇಡಿಕೆಗೆ ತಕ್ಕಂತೆ ಅನುದಾನ ಬಂದಂತೆ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಮೂಲಕ ಶಾಲಾ ಕಟ್ಟಡ, ಸಮುದಾಯ ಭವನ, ಕುಡಿಯುವ ನೀರಿನ ಸೌಲಭ್ಯ ಹಾಗೂ ರಸ್ತೆಗಳ ನಿರ್ಮಾಣ ಕಾರ್ಯ ಎಲ್ಲಡೆ ಭರದಿಂದ ಕೈಗೊಳ್ಳಲಾಗಿದೆ. ಅನೇಕ ಕಾಮಗಾರಿಗಳ ಮುಗಿದಿವೆ. ಕೆಲವಡೆ ಆರಂಭಗೊಳಿಸಲಾಗಿದೆ. ಇನ್ನೂ ಕೆಲವು ಕಡೆ ಟೆಂಡರ್ ಮುಗಿದ ಮೇಲೆ ಉಳಿದ ಬಾಕಿ ಎಲ್ಲಾ ಕಾಮಗಾರಿಗಳನ್ನು ಅಧಿಕಾರ ಅವಧಿಗೆ ಮೊದಲೇ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಯಶ್ವಂತರಾವ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿಠ್ಠಲರಾವ ಪಾಟೀಲ, ಮಲ್ಲಿನಾಥ ಪೊಲೀಸ್ ಪಾಟೀಲ, ಶರಣಬಸಪ್ಪ ಸರಾಟೆ, ಪೀರಪ್ಪ ಪೂಜಾರಿ, ರಾಜೇಂದ್ರ ಪಾರಾಣೆ, ಶಿವಪುತ್ರ ಪೂಜಾರಿ, ಅರವಿಂದ ಸರಾಟೆ, ಶ್ರೀಶೈಲ ಸರಸಂಬಿ, ಸಿದ್ದಾರಾಮ ಹಳದೊಡ್ಡಿ, ಬರಗಾಲಿ ಪೂಜಾರಿ, ಶಂಕರರಾವ ಪಾಟೀಲ, ಚೆನ್ನಯ್ಯ ಸ್ವಾಮಿ, ಲಕ್ಷ್ಮಣ ಯಾದವ, ಚೆನ್ನಪ್ಪ ಬದೋಲೆ, ವಿಶ್ವನಾಥ ಪೂಜಾರಿ, ಸಣ್ಣ ಸಣ್ಣ ನೀರಾವರಿ ಇಲಾಖೆ ಎಇಇ ಶಾಂತಪ್ಪ ಜಾಧವ ಸೇರಿದಂತೆ ಗ್ರಾಮಸ್ಥರು ಇದ್ದರು.