1.5 ಲಕ್ಷ ರೂ.ಮೌಲ್ಯದ 10 ಕೆಜಿ ಗಾಂಜಾ ಜಪ್ತಿ

ಕಲಬುರಗಿ,ಜು.18-ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಮಲಾಪುರ ತಾಲ್ಲೂಕಿನ ಜೀವಣಗಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ದಾಳಿ ನಡೆಸಿ ಚಿಂಚೋಳಿ ತಾಲ್ಲೂಕಿನ ಮಾಡಗೂಳ ಗ್ರಾಮದ ಓಂಕಾರ ತಂದೆ ತಾರು ಎಂಬಾತನನ್ನು ಬಂಧಿಸಿ 1.5 ಲಕ್ಷ ರೂಪಾಯಿ ಮೌಲ್ಯದ 10 ಕೆಜಿ ಒಣ ಗಾಂಜಾ ಜಪ್ತಿ ಮಾಡಿದ್ದಾರೆ. ಸಂಜು ಅಲಿಯಾಸ್ ಕಾಳು ಎಂಬಾತ ಪರಾರಿಯಾಗಿದ್ದು, ಆತನ ಬಂಧನಕ್ಕೆ ಜಾಲ ಬೀಸಿದ್ದಾರೆ.
ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಸವರಾಜ ಹಡಪದ ಅವರ ನಿರ್ದೇಶನದ ಮೇರೆಗೆ, ಉಪ ಆಯುಕ್ತ ಸೈಯಿದಾ ಅಜಮತ್ ಅಫ್ರೀನ್ ಅವರ ಆದೇಶದನ್ವಯ, ಅಬಕಾರಿ ಅಧೀಕ್ಷಕ ಇಸ್ಮಾಯಿಲ್ ಇನಾಮದಾರ, ಉಪ ಅಧೀಕ್ಷಕ ದೋಡಪ್ಪ ಹೆಬಳೆ ಅವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ಗೋಪಾಳೆ ಪಂಡಿತ, ಉಪ ನಿರೀಕ್ಷಕ ಅಶೋಕಕುಮಾರ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.