
ಬೀದರ, ಏ. 11:sಬೀದರ ಜಿಲ್ಲಾ ಪೊಲೀಸ ಇಲಾಖೆಯು ಮಿಂಚಿನ ಕಾರ್ಯಚರಣೆ ನಡೆಸಿ ಎರಡು ಪ್ರತ್ಯೇಕ ಪ್ರಕಣಗಳಲ್ಲಿ ಅಂದಾಜ 1 ಕೋಟಿ 40 ಲಕ್ಷ ಮೌಲ್ಯದ 150.55 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ ಎಂದು ಈಶಾನ್ಯ ವಲಯದ ಐಜಿಪಿ ಅನುಪಮ್ ಅಗರವಾಲ ಹೇಳಿದರು.
ಅವರು ಸೋಮವಾರ ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಆವರಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಏಪ್ರಿಲ್ 10 ರಂದು ಔರಾದ ತಾಲೂಕಿನ ಏಕಂಬಾ ಚೆಕ್ ಪೋಸ್ಟ್ ಹತ್ತಿರ ತೆಲಂಗಾಣ ಹಾಗೂ ಬೀದರ ಜಿಲ್ಲೆಯ ಇಬ್ಬರು ವ್ಯಕ್ತಿಗಳು ಸೇರಿ ಕಾನೂನು ಬಾಹಿರವಾಗಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಔರಾದ ವೃತ್ತ ಸಿಪಿಐ ಮಲ್ಲಿಕಾರ್ಜುನ ಇಕ್ಕಳಕಿ ಹಾಗೂ ಸಿಬ್ಬಂದಿಗಳ ನೇತೃದ ತಂಡ ಕಾರ್ಯಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂದಿಸಿ ಅವರಿಂದ 1 ಕೋಟಿ 30 ಲಕ್ಷ ಮೌಲ್ಯದ 130.15 ಕೆ.ಜಿ ಗಾಂಜಾ, ಎರಡು ಲಕ್ಷ ರೂಪಾಯಿ ಬೊಲೆರೋ ವಾಹನ ಹಾಗೂ 10 ಸಾವಿರÀ ಬೆಲೆಯ ಎರಡು ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಇಬ್ಬರು ಆರೋಪಿಗಳ ವಿರುದ್ಧ ಔರಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನೊಂದು ಪ್ರಕರಣದಲ್ಲಿ ಓರ್ವ ಆರೋಪಿನ್ನು ಬಂದಿಸಿದ್ದು ಆತನಿಂದ 10,20,000 ಮೌಲ್ಯದ 20.400 ಕೆ.ಜಿ ಗಾಂಜಾ ಹಾಗೂ 10.000 ಬೆಲೆ ಬಾಳುವ ಮೊಬೈಲ್ ಫೋನ್ ಮತ್ತು 900 ರೂಪಾರಿ ನಗದು ಜಪ್ತಿ ಮಾಡಲಾಗಿದೆ. ಎಪ್ರೀಲ್ 9 ರಂದು ತೆಲಂಗಾಣ ಮೂಲದ ವ್ಯಕ್ತಿ ಓರ್ವ ಬೀದರ ನಿಂದ ಹುಮನ್ನಾಬಾದ ಬಸ್ ಮೂಲಕ ಗಾಂಜಾ ಸಾಗಾಣಿಕೆ ಮಾಡುತ್ತಿದ್ದಾನೆ ಎಂದು ಮಾಹಿತಿ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಹುಮನ್ನಾಬಾದ ವೃತ್ತ ಸಿಪಿಐ ಶರಣಪ್ಪ ಕೊಡ್ಲಾ ನೇತೃತ್ವದ ಸಿಬ್ಬಂದಿಗಳ ತಂಡ ಇತನನ್ನು ಬಂದಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಬೀದರ ಜಿಲ್ಲೆಯು ತೆಲಂಗಾಣ ಆಂದ್ರ ಹಾಗೂ ಮಹಾರಾಷ್ಟ್ರ ರಾಜ್ಯಗಳೊಂದಿಗೆ ತನ್ನ ಗಡಿ ಹಂಚಿಕೊಂಡಿದ್ದರಿಂದ ಇಲ್ಲಿಂದ ಮಾದಕ ವಸ್ತುಗಳು ಹೆಚ್ಚಾಗಿ ಸಾಗಾಣಿಕೆ ಮಾಡುವ ಸಂಭವವಿದೆ ಆ ಹಿನ್ನೆಲೆಯಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆಯು ಅಕ್ರಮವಾಗಿ ಸಾಗಾಣಿಕೆ ಮಾಡುವ ಮಾದಕವಸ್ರುಗಳ ಮೆಲೆ ಹದ್ದಿನ ಕಣ್ಣಿಟ್ಟಿದೆ. ಇದರ ಫಲವಾಗಿ ಕಳೆದ ಮೂರು ತಿಂಗಳಿನಲ್ಲಿ 11 ಪ್ರಕಣಗಳಲ್ಲಿ 800 ಕೆಜಿ ಗಾಂಜಾ ವಶಪಡಿಸಿಕೊಂಡು 34 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಅವರು ಮಾತನಾಡಿ, ಇತ್ತೀಚೆಗೆ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಪ್ರಕರಣಗಳು ಹೆಚ್ಚಾಗಿವೆ ಇವುಗಳನ್ನು ನಮ್ಮ ಪೊಲೀಸ್ ಇಲಾಖೆಯು ಆಂತರಿಕ ಮಾಹಿತಿ ಪಡೆದು ಭೇದಿಸುತ್ತಿದೆ. ಅದರ ಜೊತೆಗೆ ಜಿಲ್ಲಾ ಪೊಲೀಸ್ ಇಲಾಖೆ ಈ ಹಿಂದೆ ಸ್ಥಾಪಿಸಿದ ರೌಡಿ ನಿಗ್ರಹ ದಳದಂತೆ, ಮಾದಕ ವಸ್ತುಗಳ ನಿಗ್ರಹ ದಳವನ್ನು ಸ್ಥಾಪಿಸಲಾಗುವುದು ಈ ತಂಡದಲ್ಲಿ ಈ ಹಿಂದೆ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ನುರಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇರಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ನಿಗ್ರಹ ದಳದÀ ಕಾರ್ಯಚಟುವಟಿಕೆ ಜೊತೆಗೆ ನೆರೆಯ ರಾಜ್ಯಗಳ ಪೊಲೀಸ್ ಇಲಾಖೆಯ ಸಹಕಾರ ಪಡೆದ ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆಗೆ ಸಂಪೂರ್ಣ ಕಡಿವಾಣ ಹಾಕಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಮಹೇಶ ಮೇಘಣ್ಣನವರ, ಭಾಲ್ಕಿ ಸಹಾಯಕ ಪೊಲೀಸ್ ಅಧಿಕ್ಷಕ ಪೃತ್ವಿಕ್ ಶಂಕರ, ಔರಾದ ವೃತ್ತದ ಸಿಪಿಐ ಮಲ್ಲಿಕಾರ್ಜುನ ಇಕ್ಕಳಕಿ ಸೇರಿದಂತೆ, ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು