1.29 ಲಕ್ಷ ರೂ.ಮೌಲ್ಯದ ಬೆಳ್ಳಿ, ಬಂಗಾರ ಕಳವು

ಕಲಬುರಗಿ,ಸೆ.23-ಮನೆ ಬೀಗ ಮುರಿದು 1,29,800 ರೂ.ಮೌಲ್ಯದ ಬೆಳ್ಳಿ ಮತ್ತು ಬಂಗಾರದ ಆಭರಣ ಕಳವು ಮಾಡಿರುವ ಘಟನೆ ಇಲ್ಲಿನ ಜೆ.ಆರ್.ನಗರದಲ್ಲಿ ನಡೆದಿದೆ.
ಜೆ.ಆರ್.ನಗರದ ಕರಣಸಿಂಗ್ ಠಾಕೂರ ಎಂಬುವವರ ಮನೆ ಬೀಗ ಮುರಿದು 60 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಲಾಕೇಟ್, 54 ಸಾವಿರ ರೂ.ಮೌಲ್ಯದ 18 ಗ್ರಾಂ.ಬಂಗಾರದ ಕಿವಿಯೋಲೆ, 5 ಸಾವಿರ ರೂ.ಮೌಲ್ಯದ 100 ಗ್ರಾಂ.ಬೆಳ್ಳಿ ಚೈನ, ದೇವರ ಮುಂದೆ ಇಟ್ಟಿದ್ದ 10 ಸಾವಿರ ನಗದುಳ್ಳ ಗಲ್ಲಾ ಪೆಟ್ಟಿಗೆ, 800 ರೂ.ಮೌಲ್ಯದ 10 ಗ್ರಾಂ.ಬೆಳ್ಳಿ ನಾಣ್ಯ ಸೇರಿ 1,29,800 ರೂ.ಮೌಲ್ಯದ ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ಕಳವು ಮಾಡಲಾಗಿದ್ದು, ಅವರು ಈ ಸಂಬಂಧ ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.