1.23 ಲಕ್ಷ ಕೋಟಿ ದಾಖಲೆ ಜಿಎಸ್‌ಟಿ ಸಂಗ್ರಹ

ನವದೆಹಲಿ, ಏ.1- ಕಳೆದ ತಿಂಗಳು ಮಾರ್ಚ್ ನಲ್ಲಿ ದಾಖಲೆಯ ಮಟ್ಟದಲ್ಲಿ ಸರಕು ಮತ್ತು ಸೇವಾ ತೆರಿಗೆ- ಜಿಎಸ್ ಟಿ ಸಂಗ್ರಹವಾಗಿದೆ.

ಮಾರ್ಚ್ ತಿಂಗಳಲ್ಲಿ ಅತಿ ಹೆಚ್ಚು 1,23,902 ಕೋಟಿ ರೂಪಾಯಿಗೆ ಎಷ್ಟು ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಕಳೆದವರ್ಷ ಮಾರ್ಚ್ ತಿಂಗಳಿಗೆ ಹೋಲಿಸಿದರೆ ಈ ವರ್ಷ ಮಾರ್ಚ್ ನಲ್ಲಿ ಶೇ. 27 ರಷ್ಟು ಅಧಿಕ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವಾಗಿದೆ

ಮಾರ್ಚ್ ತಿಂಗಳಲ್ಲಿ ದಾಖಲಾಗಿರುವ ಸರಕು ಸೇವಾ ತೆರಿಗೆಯಲ್ಲಿ 22,983 ಕೋಟಿ ಕೇಂದ್ರಿಯ ಸರಕು ಸೇವಾ ತೆರಿಗೆ, 29,329 ರಾಜ್ಯ ಸರಕು ಸೇವಾ ತೆರಿಗೆ ಮತ್ತು 62,842 ಕೋಟಿ ಐಜಿಎಸ್ ಟಿ ಸಂಗ್ರಹವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ತಿಂಗಳಲ್ಲಿ 30,000 ಕೋಟಿ ರೂಪಾಯಿ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.

ಜೊತೆಗೆ 2020- 2021ರಲ್ಲಿ ದಾಖಲೆಯ ಮಟ್ಟದಲ್ಲಿ‌ ಜಿಎಸ್ ಟಿ ಸಂಗ್ರಹ ಮಾಡಲಾಗಿದೆ.ಇದು ಶೇ.‌ 27 ರಷ್ಟು ಹೆಚ್ಚಿದೆ ಎಂದು ಸಚವಾಲಯ ತಿಳಿಯಲಿದೆ.

ಕರ್ನಾಟಕದಲ್ಲಿ 8 ಸಾವಿರ ಕೋಟಿ ರೂ:

ಕರ್ನಾಟಕದಲ್ಲಿ 7918 ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ ಮಾರ್ಚ್ ತಿಂಗಳಲ್ಲಿ ರಾಜ್ಯದಲ್ಲಿ ಸಂಗ್ರಹವಾಗಿದೆ.

ದೇಶದಲ್ಲಿ ಸಂಗ್ರಹವಾಗಿರುವ ಒಟ್ಟಾರೆ ಸರಕು ಮತ್ತು ಸೇವಾ ತೆರಿಗೆ ಬಗ್ಗೆ ಮಹಾರಾಷ್ಟ್ರದಲ್ಲಿ 17 ಸಾವಿರ ಕೋಟಿಗೂ ಹೆಚ್ಚು ಸಂಗ್ರಹವಾಗಿದೆ.

ದೇಶದಲ್ಲಿ ಕಳೆದ ಆರು ತಿಂಗಳಿನಿಂದ ಸರಕು ಮತ್ತು ಸೇವಾ ತೆರಿಗೆ ಪ್ರತಿ ತಿಂಗಳು ಒಂದು ಲಕ್ಷ ಕೋಟಿಗೂ ಅಧಿಕ ಸಂಗ್ರಹವಾಗುತ್ತದೆ