1.19 ಲಕ್ಷ ರೂ. ಮೌಲ್ಯದ ಬಿಯರ್ ನಾಶ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.09:- ಅವಧಿ ಮೀರಿದ, ಮಾನವ ಸೇವನೆಗೆ ಯೋಗ್ಯವಲ್ಲದ 1.19 ಲಕ್ಷ ರು. ಮೌಲ್ಯದ 394 ಲೀಟರ್ ಬಿಯರ್ ಅನ್ನು ನಾಶಪಡಿಸಲಾಯಿತು.
ತಾಲೂಕಿನ ಹೊರ ವಲಯದ ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮದ ಗೋದಾಮಿನಲ್ಲಿದ್ದ ಅವಧಿ ಮೀರಿದ, ಮಾನವ ಸೇವನೆಗೆ ಯೋಗ್ಯವಲ್ಲದ 1.19 ಲಕ್ಷ ರು. ಮೌಲ್ಯದ 394 ಲೀಟರ್ ಬಿಯರ್ ಅನ್ನು ಅಬಕಾರಿ ಉಪ ಅಧೀಕ್ಷಕರಾದ ಎಂ.ಡಿ.ಮೋಹನ್ ನೇತೃತ್ವದಲ್ಲಿ ಕಸಬಾ ಹೋಬಳಿ ಕಂದಾಯ ನಿರೀಕ್ಷಕ ಬಿ. ರಾಜಶೇಖರ್ ಅವರ ಸಮಕ್ಷಮದಲ್ಲಿ ಅಬಕಾರಿ ನಿರೀಕ್ಷಕ ಗುರುನಾಥಶೆಟ್ಟಿ, ಡಿಪೋ ವ್ಯವಸ್ಥಾಪಕ ಆರ್.ಬಿ. ಬಸವರಾಜು ಅವರು ಮಾನವ ಸೇವೆನೆಗೆ ಯೋಗ್ಯವಲ್ಲದ ಬಿಯರ್ ಅನ್ನು ನೆಲಕ್ಕೆ ಸುರಿಯುವ ಮೂಲಕ ನಾಶಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿ ಲೋಕೇಶ್, ನಿಗಮಾಧಿಕಾರಿ ಸಿದ್ದರಾಜು, ಸಿಬ್ಬಂದಿಗಳಾದ ಎಂ.ಪಿ. ಕುಮಾರ್ ಇತರರು ಇದ್ದರು.