1.19 ಲಕ್ಷ ಮೌಲ್ಯದ ಅಕ್ರಮ ಮದ್ಯ ವಶ

ಕಲಬುರಗಿ,ಏ 4: ಚುನಾವಣೆ ಹಿನ್ನೆಲೆ ಅಕ್ರಮ ಮದ್ಯ ಸಾಗಾಟದ ಮೇಲೆ ಹದ್ದಿನ ಕಣ್ಣನ್ನಿಡಲಾಗಿದ್ದು ಜಿಲ್ಲೆಯ ವಿವಿಧೆಡೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.
ಅಫಜಲಪೂರ ತಾಲೂಕಿನ ಚೌಡಾಪುರ ಬಳಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 84 ಸಾವಿರ ರೂ.ಮೌಲ್ಯದ 198 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.ಸಾಗಾಟ ಮಾಡುತ್ತಿದ್ದ ಶೇಖರ್ ಎಂಬಾತನನ್ನು ಬಂಧಿಸಲಾಗಿದೆ. ಜೊತೆಗೆ ಒಂದು ಕಾರು ಕೂಡ ವಶಕ್ಕೆ ಪಡೆಯಲಾಗಿದೆ.
ಚಿತ್ತಾಪೂರ ತಾಲೂಕಿನ ಕುಂಬಾರ ಹಳ್ಳಿ ಕ್ರಾಸ್ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ 15 ಸಾ.ಮೌಲ್ಯದ 10 ಲೀಟರ್ ಕಲಬೆರಕೆ ಸೇಂದಿ ವಶಪಡಿಸಿಕೊಂಡು ಬಾಶಾಮಿಯಾ ಎಂಬಾತನನ್ನು ಬಂಧಿಸಲಾಗಿದೆ. ಒಂದು ದ್ವಿಚಕ್ರ ವಾಹನÀ ಕೂಡ ವಶಪಡಿಸಿಕೊಳ್ಳಲಾಗಿದೆ.
ಸೇಡಂ ತಾಲೂಕಿನ ಬಟಗೇರ ಬಿ ಬಳಿ 20 ಸಾ ಮೌಲ್ಯದ 51.840 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಪರಾರಿಯಾಗಿದ್ದಾನೆ. ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.