
ನವದೆಹಲಿ , ಜ.1- ಡಿಸೆಂಬರ್ ತಿಂಗಳ ಅವಧಿ ಸುಮಾರುಯಲ್ಲಿ ಇದೇ ಮೊದಲ ಬಾರಿಗೆ ದಾಖಲೆ1.15 ಲಕ್ಷ ಕೋಟಿ ಜಿಎಸ್ ಟಿ ಸಂಗ್ರಹವಾಗಿದೆ ಈ ಎಂದು ಹಣಕಾಸು ಸಚಿವಾಲಯ ಇಂದು ತಿಳಿಸಿದೆ.
2017 ರಂದು ಜಿಎಸ್ ಜಾರಿಯಾದ ಬಳಿಕ ಅತ್ಯಧಿಕ 1,15,274 ಕೋಟಿ ರೂ ಸಂಗ್ರಹವಾಗಿದೆ.
ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಆರ್ಥಿಕ ಪರಿಸ್ಥಿತಿ ತ್ವರಿತವಾಗಿ ಚೇತರಿಕೆ ಕಾಣುತ್ತಿರುವ ಸಂಕೇತವಾಗಿದೆ.
2020ರ ನವೆಂಬರ್ ತಿಂಗಳಿನಿಂದ ಡಿ.31ರವರೆಗೆ ಸಲ್ಲಿಸಲಾದ ಒಟ್ಟು ಜಿಎಸ್ ಟಿಆರ್-3 ಬಿ ರಿಟರ್ನ್ ಸಂಖ್ಯೆ 87 ಲಕ್ಷ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದರಲ್ಲಿ ಸಿಜಿಎಸ್ ಟಿ 21,365 ಕೋಟಿ, ಎಸ್ ಜಿಎಸ್ ಟಿ 27,804 ಕೋಟಿ, ಐಜಿಎಸ್ ಟಿ 57,426 ಕೋಟಿ (ಸರಕು ಗಳ ಆಮದಿಗೆ 27,050 ಕೋಟಿ ರೂ.ಗಳನ್ನು ಸೇರಿ) ಮತ್ತು ಸೆಸ್ 8,579 ಕೋಟಿ (ಸರಕುಗಳ ಆಮದಿನ ಮೇಲೆ 971 ಕೋಟಿ ರೂ.) ಸೇರಿದೆ.ಈ ಮೂಲಕ ದೇಶದಲ್ಲೇ ಡಿಸೆಂಬರ್ ನಲ್ಲಿ ಹೆಚ್ಚು ಮೊತ್ತದ ಜಿಎಸ್ ಟಿ ಸಂಗ್ರಹವಾಗಿದೆ ಎಂದು ಹಣಕಾಸು ಇಲಾಖೆಯ ಹೇಳಿದೆ.