1.14 ಲಕ್ಷ ರೂ.ಮೊತ್ತದ 13 ಎಂಆರ್‍ಆಫ್ ಟೈಯರ್ ಕಳವು

ಕಲಬುರಗಿ,ಡಿ.8-ಲಾರಿಯಲ್ಲಿದ್ದ 1,14,180 ರೂ.ಮೊತ್ತದ 13 ಎಂಆರ್‍ಎಫ್ ಟೈಯರ್ ಕಳವಾದ ಘಟನೆ ನಗರದ ನಂದೂರ ಇಂಡಸ್ಟ್ರೀಯಲ್ ಏರಿಯಾದಲ್ಲಿ ನಡೆದಿದೆ.
ಈ ಸಂಬಂಧ ಲಾರಿ ಚಾಲಕ ರಾಮ ಬಾಕ್ಲೆ ಎಂಬುವವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಹೈದ್ರಾಬಾದನ ಎಂಆರ್‍ಎಫ್ ಲಿಮಿಟೆಡ್‍ನಿಂದ ಲಾರಿಯಲ್ಲಿ 234 ಟೈಯರ್ ತುಂಬಿಕೊಂಡು ಕಲಬುರಗಿ ನಗರದ ನಂದೂರ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಎಂಆರ್‍ಎಫ್ ಗೋದಾಮಿನಲ್ಲಿ ಇಳಿಸಲು ತರಲಾಗಿತ್ತು. ಟೈಯರ್‍ಗಳನ್ನು ಇಳಿಸಲು ಯಾರೂ ಇಲ್ಲದೇ ಇದ್ದುದ್ದರಿಂದ ಅವರು ಕ್ಲೀನರ್ ಜೊತೆ ರಾತ್ರಿ ಲಾರಿ ಕ್ಯಾಬಿನ್‍ನಲ್ಲಿ ಮಲಗಿಕೊಂಡಿದ್ದಾರೆ. ಬೆಳಿಗ್ಗೆ ಎದ್ದು ನೋಡಿದಾಗ ಲಾರಿ ಹಿಂದಿನ ಹಗ್ಗ ಹರಿದು, ತಾಡಪತ್ರಿ ತೆಗೆದು 1.14 ಲಕ್ಷ ರೂ.ಮೊತ್ತದ 13 ಟಾಯರ್‍ಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.