1.ರೂ 75 ಪೈಸೆ ಹಾಲು ದರ ಕಡಿತ, ರೈತರಿಗೆ ಮನ್ಮುಲ್ ಶಾಕ್

ಮಂಡ್ಯ, ಜು.೧೬- ಜಿಲ್ಲೆಯ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ೧ ರೂಪಾಯಿ ೭೫ ಪೈಸೆ ಕಡಿತ ಮಾಡಿ ಮನ್ಮುಲ್ ಅನ್ನದಾತರಿಗೆ ಶಾಕ್ ನೀಡಿದೆ. ಇಂದಿನಿಂದಲೇ ಈ ಪರಿಷ್ಕೃತ ದರ ಜಾರಿಗೆ ಬರಲಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿರುವ ಹೊತ್ತಲ್ಲೇ ಮನ್ಮುಲ್ ಹಾಲಿನ ದರ ಕಡಿತ ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಮೊದಲು ರೈತರಿಗೆ, ೩೨ ರೂ ೨೫ ಪೈಸೆ ನೀಡಲಾಗುತ್ರಿತ್ತು. ಈಗ ದರ ಕಡಿತ ಮಾಡಿರುವುದರಿಂದ ಇಂದಿನಿಂದ ೩೦ ರೂ ೫೦ ಪೈಸೆ ನೀಡಲಾಗುತ್ತದೆ ಎಂದು ಮನ್ಮುಲ್ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ಮನ್ಮುಲ್ ಒಕ್ಕೂಟದ ಸ್ಥಿತಿಗತಿಯನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.