
ರಾಬರಿಯಲ್ಲಿ ಗಳಿಸಿದ ನಿಧಿಯ ಸುತ್ತ ನಡೆಯುವ ಕಥಾಹಂದರ ಇಟ್ಟುಕಂಡು “1ರಾಬರಿ ಕಥೆ” ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡಲು ನಿರ್ದೇಶಕ ಗೋಪಾಲ್ ಹಳ್ಳೇರ ಹೊನ್ನಾವರ.
ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಬೇಲೂರಿನ ಸಂತೋಷ್ ನಾಗೇನಹಳ್ಳಿ ಬಂಡವಾಳ ಹಾಕಿದ್ದು ರಣಧೀರ್ ಗೌಡ, ರಿಷ್ವಿ ಭಟ್ ,ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಟ್ರೈಲರ್ ಬಿಡುಗಡೆ ಬಳಿಕ ಮಾತಿಗಿಳಿದ ನಿರ್ಮಾಪಕ ಸಂತೋಷ್, ಪಕ್ಕಾ ಮಾಸ್ ಕಮರ್ಷಿಯಲ್, ಕಾಮಿಡಿ, ಆಕ್ಷನ್, ಸೆಂಟಿಮೆಂಟ್ ಕಥಾಹಂದರ. ಚಿತ್ರೀಕರಣ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ತೆರೆಗೆ ಬರಲಿದೆ.
ನಿರ್ದೇಶಕ ಗೋಪಾಲ್ ಹಳ್ಳೇರ,ಉತ್ತರ ಕರ್ನಾಟಕದಲ್ಲಿ ನಡೆಯುವ ಕಥೆ ಇದು. ನಾಯಕ ದೊಡ್ಡ ರಾಬರಿಯಲ್ಲಿ ಬಂಗಾರ ದರೋಡೆಮಾಡಿ ಆ ನಿಧಿಯನ್ನು ಒಂದೆಡೆ ಸಂಗ್ರಹಿಸಿಡುತ್ತಾನೆ. ನಂತರ ಆತ 5 ವರ್ಷ ಜೈಲಲ್ಲಿರಬೇಕಾಗುತ್ತದೆ, ಜೈಲಿಂದ ಹೊರ ಬಂದಮೇಲೆ ನಿಧಿಯಿಟ್ಟಿದ್ದ ಜಾಗದಲ್ಲಿ ದೇವಸ್ಥಾನ ನಿರ್ಮಾಣವಾಗಿರುತ್ತೆ, ನಾಯಕ ಮತ್ತೆ ಆ ನಿಧಿ ಪಡೆದುಕೊಳ್ಳಲು ಸಾಧ್ಯವಾಯಿತೇ ಇಲ್ಲವೇ ಎನ್ನುವುದೇ ಚಿತ್ರದ ಕಥೆ ಎಂದರು.
ನಾಯಕ ರಣಧೀರ್‌ಗೌಡ ಮಾತನಾಡಿ ಚಿತ್ರದಲ್ಲಿ ಪಾತ್ರಕ್ಕೆ 2 ಶೇಡ್ ಇದೆ. ಸಿಂದನೂರಿನ ರವಕುಂದ, ಬೇಲೂರು, ಚಿಕ್ಕಮಗಳೂರು, ಸಕಲೇಶಪುರ, ಹೊನ್ನಾವರ , ಬೆಂಗಳೂರು ಸೇರಿ ಒಟ್ಟು 44 ದಿನಗಳ ಕಾಲ ಚಿತ್ರೀಕರಿಸಿದ್ದೇವೆ ಎಲ್ಲರ ಸಹಕಾರವಿರಲಿ ಎಂದರು.
ನಾಯಕಿ ರಿಶ್ವಿಭಟ್, ಚಿತ್ರದಲ್ಲಿ ಅಂಗನವಾಡಿ ಟೀಚರ್ ಭಾಮಾ ಎಂಬ ಪಾತ್ರ ಮಾಡಿದ್ದೇನೆ. ಊರಿಗೆ ಸರ್ವೆ ಆಫೀಸರ್ ಬಂದಾಗ ಅವರ ಮೇಲೆ ಹೇಗೆ ಲವ್ವಾಗುವ ಪಾತ್ರ ಎಂದು ಹೇಳಿದರು.
ಹಿರಿಯನಟ ಸುಂದರರಾಜ್ ,ಶಿವರಾಜ್ ಕೆಆರ್ ಪೇಟೆ ಪ್ರಮುಖ ಪಾತ್ರ ಮಾಡಿದ್ದಾರೆ. ಶ್ರೀವತ್ಸ ಸಂಗೀತ, ನಿರ್ಮಾಪಕ ಸಂತೋಷ್ ನಾಗೇನಹಳ್ಳಿ ನಿರ್ಮಾಣದ ಜೊತೆಗೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕರಿಸುಬ್ಬು, ಕಡ್ಡಿಪುಡಿಚಂದ್ರು, ತಬಲಾನಾಣಿ, ಜಹಾಂಗೀರ್, ಗಿರೀಶ್ ಶಿವಣ್ಣ, ಮೂಗ್ ಸುರೇಶ್, ಎಂ.ಕೆ.ಮಠ್, ನವೀನ್ ಪಡೀಲ್, ಸಂಜುಬಸಯ್ಯ ಇತರರು ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಕಾಶ್ ಸಂಭಾಷಣೆ, ಸಂತೋಷ್ ನಾಗೇನಹಳ್ಳಿ, ಪ್ರಕಾಶ್ ಸಾಹಿತ್ಯ, ಡಿಫರೆಂಟ್ ಡ್ಯಾನಿ ಸಾಹಸ, ಹರೀಶ್ ಜಿಂದೆ ಛಾಯಾಗ್ರಹಣವಿದೆ.