1 ಟನ್ ಪ್ಲಾಸ್ಟಿಕ್ ವಶ:50 ಸಾವಿರ ದಂಡ

ಕಲಬುರಗಿ,ಜ.11: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ 1 ಟನ್ ತೂಕದ ಪ್ಲಾಸ್ಟಿಕ್ ಗ್ಲಾಸ್, ಮತ್ತು ಕ್ಯಾರಿ ಬ್ಯಾಗ್ ವಶಪಡಿಸಿಕೊಂಡಿದ್ದಾರೆ.ಒಟ್ಟು 50 ಸಾವಿರ ರೂ ದಂಡ ವಿಧಿಸಲಾಗಿದೆ.
ಉಪ ಪರಿಸರ ಅಧಿಕಾರಿ ಡಾ.ಅದಂಸಾಬ್ ಪಟೇಲ್,ಎಇಒಗಳಾದ ಶ್ರದ್ಧಾ ಬಿ.ಎಚ್, ಸುಧಾರಾಣಿ ಕೊಲ್ಲೂರ, ಮತ್ತು ಮಹಾನಗರ ಪಾಲಿಕೆಯ ಸ್ಯಾನಿಟರಿ ಇನ್ಸ್‍ಪೆಕ್ಟರುಗಳಾದ ಅವಿನಾಶ,ಮನೀಶ ದಾಳಿಯಲ್ಲಿ ಪಾಲ್ಗೊಂಡರು