1 ಕ್ವಿಂಟಲ್ 30 ಕೆಜಿ ದಿನಬಳಕೆ ಪ್ಲಾಸ್ಟಿಕ್ ವಶ

ತಾಳಿಕೋಟೆ:ಜು.22: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ದಿನಬಳಿಕೆಗೆ ಪ್ಲಾಸ್ಟಿಕ್ ಬಳಿಸುವದನ್ನು ನಿಷೇಧಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರೂ ಕೂಡಾ ಅಕ್ರಮವಾಗಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಇನ್ನಿತರ ಬಳಿಕೆಯ ವಸ್ತುಗಳನ್ನು ಮಾರಾಟದಲ್ಲಿ ತೊಡಗಿದ್ದ ಅಂಗಡಿಗಳ ಮೇಲೆ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಅವರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ 1 ಕ್ವಿಂಟಲ್ 30 ಕೆಜಿ ವಶಕ್ಕೆ ಪಡೆದುಕೊಂಡಿದ್ದಾರೆ.

ಪಟ್ಟಣದಲ್ಲಿಯ ಕಿರಾಣಿ ಅಂಗಡಿ, ಸ್ಟೇಷನರಿ ಅಂಗಡಿ, ಒಳಗೊಂಡಂತೆ ಇನ್ನಿತರ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಿನಬಳಿಕೆಯ ಕ್ಯಾರಿಬ್ಯಾಗ್ ಒಳಗೊಂಡಂತೆ ಇನ್ನಿತರ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು ಇನ್ನೊಮ್ಮೆ ಕ್ಯಾರಿಬ್ಯಾಗ್ ಇನ್ನಿತರ ದಿನಬಳಿಕೆ ಪ್ಲಾಸ್ಟಿಕ್ ಮಾರಾಟ ಮತ್ತು ಬಳಿಕೆ ಮಾಡುವದು ಕಂಡು ಬಂದಲ್ಲಿ ಪ್ರಕರ್ಣ ದಾಖಲಿಸಿ ದಂಡ ವಿಧಿಸಬೇಕಾಗುತ್ತದೆ ಎಂದು ಮುಖ್ಯಾಧಿಕಾರಿ ಸುರೇಶ ನಾಯಕ ಅವರು ಏಚ್ಚರಿಸಿದರು.

ಈ ದಾಳಿಯಲ್ಲಿ ಪುರಸಭೆ ಕಂದಾಯ ಅಧಿಕಾರಿ ಸಿದ್ದಾರ್ಥ ಕಟ್ಟಿಮನಿ, ಶ್ರೀಪಾದ ಜೋಶಿ, ಎಸ್.ಎ.ಘತ್ತರಗಿ, ಸಿದ್ದಲಿಂಗಯ್ಯ ಚೊಂಡಿಪಾಟೀಲ, ಸಿಬ್ಬಂದಿಗಳು ಇದ್ದರು.