೯/೧೧ ನೆನಪಿನ ದಿನ

ಇದೇ ಸೆಪ್ಟೆಂಬರ್ ೧೧ನೇ ತಾರೀಕಿಗೆ ಅಮೆರಿಕಾದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ ಅಲ್‌ ಖೈದಾ ದಾಳಿಗೆ ೨೧ ವರ್ಷಗಳಾಗುತ್ತಿವೆ. ಆದರೆ, ಈ ದಾಳಿಗೆ ಕಾರಣರಾದ ಮಾಸ್ಟರ್ ಮೈಂಡ್ ಗಳನ್ನು ೨೦೦೩ರ ಮಾರ್ಚ್ ೧ರಂದು ಬಂಧಿಸಿದ್ದರೂ ಅವರಿಗೆ ಇನ್ನೂ ಶಿಕ್ಷೆಯಾಗಿಲ್ಲ. ಭಯೋತ್ಪಾದಕರ ವಿರುದ್ಧ ಅಮೆರಿಕದ ಹೋರಾಟದಲ್ಲಿ ಇದು ಅತ್ಯಂತ ಪ್ರಮುಖ ವೈಫಲ್ಯ ಎಂಬ ಟೀಕೆಗಳು ಎದ್ದಿವೆ.
೨೦೦೧ರ ಸೆಪ್ಟೆಂಬರ್ ೧೧ರಂದು ಇಡೀ ಜಗತ್ತೇ ಗರಬಡಿದವರಂತೆ ಜಗತ್ತಿನ ಹಿರಿಯಣ್ಣನಂತಿರುವ ಅಮೆರಿಕದತ್ತ ಕಣ್ಣು ಕೀಳದೆ ನೋಡುತ್ತಿತ್ತು. ತಾಲಿಬಾನ್ ಭಯೋತ್ಪಾದಕರಿಂದ ಆಕ್ರಮಣಕ್ಕೊಳಗಾಗಿದ್ದ ೧೩೬೨ ಅಡಿಗಳೆತ್ತರದ ೧೧೦ ಮಹಡಿಗಳಿದ್ದ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಕಟ್ಟಡಗಳು ನೋಡನೋಡುತ್ತಿದ್ದಂತೆ ನೆಲಸಮವಾಗಿದ್ದವು. ಈಗ ಅಲ್ಲಿ ಕಟ್ಟಡದ ಅವಶೇಷವೂ ಉಳಿದಿಲ್ಲ. ವಿಶ್ವದ ಜನತೆಯೂ ಅದನ್ನು ಮರೆತಿರಬಹುದು. ಆದರೆ ಅಮೆರಿಕ ಮರೆತಿಲ್ಲ! ಅಮೆರಿಕಕ್ಕೆ ಮರೆಯಲು ಸಾಧ್ಯವೂ ಇಲ್ಲ
೨೦೦೩ರ ಮಾರ್ಚ್ ೧ರಂದು ದಾಳಿಯ ಮಾಸ್ಟರ್ ಮೈಂಡ್ಗಳಲ್ಲಿ ಒಬ್ಬನಾದ ಖಾಲಿದ್ ಶೇಖ್ ಮಹಮ್ಮದ್ನನ್ನು ಪಾಕಿಸ್ತಾನದ ರಾವಲ್ಪಿಂಡಿಯಿಂದ ಬಂಧಿಸಲಾಗಿತ್ತು. ಕೆಲವು ದಾಳಿಯಾಗಿ ಈತನ ಬಂಧನಕ್ಕೆ ಅಮೆರಿಕವು ಬರೋಬ್ಬರಿ ೧೮ ತಿಂಗಳು ತೆಗೆದುಕೊಂಡಿತ್ತು. ಈತ ಮತ್ತು ಉಳಿದ ನಾಲ್ವರು ಇನ್ನೂ ಗುಂಟನಮೊ ಬೇನಲ್ಲಿ ಬಂಧನದಲ್ಲಿದ್ದು, ಇವರ ವಿಚಾರಣೆ ಇನ್ನೂ ಪೂರ್ತಿಗೊಂಡಿಲ್ಲ.
ಕಳೆದ ತಿಂಗಳು ಕೂಡ ಇವರ ವಿಚಾರಣೆಗೆ ದಿನ ನಿಗದಿ ಮಾಡಲಾಗಿತ್ತು. ಆದರೆ, ಅನಿವಾರ್ಯ ಕಾರ್ಯಗಳಿಂದ ಈ ವಿಚಾರಣೆ ಮುಂದೂಡಲಾಗಿತ್ತು. ಇದು ಅವಳಿ ಗೋಪರದ ಮೇಲೆ ಭಯೋತ್ಪಾದಕರ ದಾಳಿಯಿಂದ ಮೃತಪಟ್ಟ ಸುಮಾರು ೩ ಸಾವಿರ ಜನರ ಕುಟುಂದವರಿಗೆ ನೋವುಂಟು ಮಾಡಿತ್ತು. ಈ ಕುರಿತು ಸಾಕಷ್ಟು ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಉಗ್ರ ಮೊಹಮ್ಮದ್ ಇನ್ನೂ ಬದುಕಿದ್ದಾನೆ ಅನ್ನೋ ನಂಬಿಕೆ ಸಂತ್ರಸ್ತರಿಗೆ ಇದೆ. ಹೀಗಾಗಿ, ಆತನನ್ನು ಕನಿಷ್ಟ ಸೇನಾ ಕೋರ್ಟ್ಗಾದರೂ ಹಾಜರು ಪಡಿಸಿ ಎಂಬ ಆಗ್ರಹಗಳು ಕೇಳಿ ಬರುತ್ತಿವೆ.
ನಾಗರಿಕ ವಿಮಾನಗಳನ್ನೇ ಬಳಸಿ ಕ್ಷಿಪಣಿಯಂತೆ ಅಮೆರಿಕದ ಅವಳಿ ಗೋಪುರದ ಮೇಲೆ ದಾಳಿ ನಡೆಸಲಾಗಿತ್ತು. ಈಗ ಈ ಸ್ಥಳದಲ್ಲಿ ವಿಶ್ವ ವ್ಯಾಪಾರ ಕೇಂದ್ರದ ಮೂರು ಕಟ್ಟಡಗಳು ನಿರ್ಮಾಣಗೊಂಡಿವೆ. ಜತೆಗೆ, ಇದೇ ಸ್ಥಳದಲ್ಲಿ ಸ್ಮಾರಕ ಮತ್ತು ವಸ್ತು ಸಂಗ್ರಹಾಲಯವನ್ನೂ ನಿರ್ಮಿಸಲಾಗಿದೆ. ಒಸಾಮಾ ಬಿನ್ ಲಾಡೆನ್ ನೇತೃತ್ವದ ಆಲ್ ಕೈದಾವು ಈ ದಾಳಿ ನಡೆಸಿತ್ತು. ಈ ದಾಳಿಯಿಂದ ೨,೯೯೬ ಹೆಚ್ಚು ಜನರು ಮೃತಪಟ್ಟಿದ್ದರು. ಆರು ಸಾವಿರಕ್ಕಿಂತ ಹೆಚ್ಚು ಜನರು ಗಾಯಗೊಂಡಿದ್ದರು. ೨೦೦೧ ರ ಸೆಪ್ಟೆಂಬರ್ ೧೧ ರಂದು ಅಲ್ ಖೈದಾ ಉಗ್ರ ಸಂಘಟನೆ ವಿಮಾನವನ್ನು ಹೈಜಾಕ್ ಮಾಡಿತ್ತು. ಎರಡು ವಿಮಾನಗಳನ್ನು ನ್ಯೂಯಾರ್ಕ್ ನ ವರ್ಲ್ಡ್ ಟ್ರೇಡ್ ಸೆಂಟರ್ ಗೆ ಡಿಕ್ಕಿ ಹೊಡೆಸಿತ್ತು. ಇದರಿಂದ ೨೭೫೩ ಜನರು ಮೃತಪಟ್ಟಿದ್ದರು. ಮೂರನೇ ದಾಳಿಯು ಪೆಂಟಗಾನ್ ಕಟ್ಟಡದ ಮೇಲೆ ನಡೆದು ಅಲ್ಲಿ ೧೮೪ ಜನರು ಮೃತಪಟ್ಟಿದ್ದರು. ಶಂಕ್ಸ್ ವಿಲ್ಲೆ ಮೇಲೆ ನಾಲ್ಕನೇ ದಾಳಿ ನಡೆಸಿ ೪೦ ಜನರನ್ನು ಕೊಲ್ಲಲಾಗಿತ್ತು.
ಬೆಳಗ್ಗೆ ೮.೪೬ ಗಂಟೆಗೆ ಮೊದಲ ದಾಳಿ ನಡೆದಿತ್ತು. ಐವರು ಹೈಜಾಕರ್ ಗಳನ್ನೊಳಗೊಂಡ ೯೨ ಪ್ರಯಾಣಿಕರಿದ್ದ ಅಮೆರಿಕನ್ ಏರ್ ಲೈನ್ಸ್ ನ ಬೋಯಿಂಗ್ ೭೬೭ ವಿಮಾನ ವರ್ಲ್ಡ್ ಟ್ರೇಡ್ ಸೆಂಟರ್ ನ ನಾರ್ತ್ ಟವರ್ ಗೆ ಡಿಕ್ಕಿ ಹೊಡೆದಿತ್ತು. ಬೆಳಗ್ಗೆ ೯.೦೩ ಗಂಟೆಗೆ ಎರಡನೆಯ ದಾಳಿ ನಡೆದಿತ್ತು. ಐವರು ಹೈಜಾಕರ್ ಗಳನ್ನೊಳಗೊಂಡು ೬೫ ಪ್ರಯಾಣಿಕರಿದ್ದ ಯುನೈಟೆಡ್ ಏರ್ ಲೈನ್ಸ್ ಬೋಯಿಂಗ್ ೭೬೭ ವಿಮಾನ ಡಬ್ಲ್ಯೂಟಿಸಿಯ ಸೌತ್ ಟವರ್ ಗೆ ಡಿಕ್ಕಿ ಹೊಡೆಸಲಾಗಿತ್ತು. ಬೆಳಗ್ಗೆ ೯.೩೭ ಕ್ಕೆ ಪೆಂಟಗಾನ್ ಮೇಲೆ ದಾಳಿ ನಡೆಸಲಾಯಿತು.
ಬೆಳಗ್ಗೆ ೯.೫೯ ಕ್ಕೆ ಇನ್ನೊಂದು ವಿಮಾನ ಡಿಕ್ಕಿ ಹೊಡೆದು ಸೌತ್ ಟವರ್ ನೆಲಸಮಗೊಂಡಿತು. ಬೆಳಗ್ಗೆ ೧೦.೦೩ ಗಂಟೆಗೆ ಐವರು ಹೈಜಾಕರ್ ಗಳನ್ನೊಳಗೊಂಡು ೪೪ ಮಂದಿಯನ್ನು ಹೊತ್ತೊಯ್ಯುತ್ತಿದ್ದ ಬೋಯಿಂಗ್ ೭೫೭ ವಿಮಾನವನ್ನು ಉಗ್ರರು ಪೆನ್ಸಿಲ್ವೇನಿಯಾದ ಶಂಕ್ಸ್ ವಿಲ್ಲೆ ಬಳಿ ನೆಲಕ್ಕೆ ಅಪ್ಪಳಿಸಿದ್ದರು. ವಿಮಾನ ಡಿಕ್ಕಿಯಾಗಿ ೧೦೨ ನಿಮಿಷಗಳ ನಂತರ ಡಬ್ಲ್ಯೂಟಿಸಿಯ ನಾರ್ತ್ ಟವರ್ ಸಂಪೂರ್ಣ ಕುಸಿದು ಬಿತ್ತು. ಧೂಳು ಹಾಗೂ ಹೊಗೆ ಸುತ್ತಮುತ್ತಲ ಪ್ರದೇಶವನ್ನೆಲ್ಲ ಆವರಿಸಿತ್ತು. ಹೀಗೆ, ಸರಣಿ ಅಪಘಾತಗಳ ಮೂಲಕ ಅಮೆರಿಕಕ್ಕೆ ಭಯೋತ್ಪಾದಕರು ಶಾಕ್ ನೀಡಿದ್ದರು. ಅಂದಿನ ಘಟನೆಯಲ್ಲಿ ಭಾರತೀಯರು ಸೇರಿದಂತೆ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
ಉಗ್ರರ ದಾಳಿಯಲ್ಲಿ ಧ್ವಂಸಗೊಂಡಿದ್ದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳಿದ್ದ ಜಾಗದಲ್ಲೇ ಹೊಸದಾಗಿ ಒನ್ ವರ್ಲ್ಡ್ ಟ್ರೇಡ್ ಸೆಂಟರ್ ನಿರ್ಮಿಸಲಾಗಿದೆ. ಒನ್ ವರ್ಲ್ಡ್ ಟ್ರೇಡ್ ಸೆಂಟರ್ ನ್ಯೂಯಾರ್ಕ್ ನಗರದಲ್ಲಿರುವ ಅತ್ಯಂತ ದೊಡ್ಡ ಕಟ್ಟಡ. ೧,೭೭೬ ಅಡಿಗಳಷ್ಟು ಎತ್ತರವಿರುವ (ಆ?ಯಂಟೆನಾ ಸೇರಿ) ಈ ಕಟ್ಟಡವನ್ನು ೨೦೧೪ರ ನವೆಂಬರ್ ೩ರಂದು ಉದ್ಘಾಟಿಸಲಾಯಿತು.
ಸೆಪ್ಟೆಂಬರ್ ೧೧ರ ಈ ದಿನ ಜಗತ್ತು ಒಸಾಮಾ ಬಿನ್ ಲಾಡೆನ್ ಸೃಷ್ಟಿಸಿದ ವಿಧ್ವಂಸವನ್ನು ನೆನಪಿಸಿಕೊಳ್ಳುತ್ತದೆ. ಆ ದಾಳಿಯ ೧೨ನೇ ವಾರ್ಷಿಕ ದಿನ. ಆದರೆ ಇದೇ ಸೆಪ್ಟೆಂಬರ್ ೯/೧೧ರಂದು ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಭಾಷಣ ಮಾಡಿದ್ದರು ಹಾಗೂ ಇವತ್ತಿಗೆ ಅದಕ್ಕೆ ೧೨೦ ವರ್ಷಗಳು ಸಂದವು ಎಂದು ನೆನಪಿಸಿಕೊಳ್ಳದಿರುವುದು ವಿಷಾದದ ಸಂಗತಿ. ಅಂತೆಯೇ, ೧೯೦೬ರ ೯/೧೧ ದಿನಾಂಕದಂದು ಮಹಾತ್ಮ ಗಾಂಧಿಯವರೂ ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹವನ್ನು ಅಪ್ಪಿಕೊಂಡಿದ್ದರು.