೯ ಪತ್ರಕರ್ತರಿಗೆ ವಿಮಾನಯಾನ ನಿಷೇದ

ಮುಂಬೈ,ಅ.೨೬- ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಪ್ರಕಣಕ್ಕೆ ಸಂಬಂಧಿಸಿದಂತೆ ೯ ಪತ್ರಕರ್ತರಿಗೆ ಎರಡು ವಾರಗಳ ಕಾಲ ಇಂಡಿಗೋ ವಿಮಾನಯಾನ ಸಂಸ್ಥೆ ನಿಷೇದ ಹೇರಿದೆ.
ಸೆಪ್ಟೆಂಬರ್ ೯ ರಂದು ನಟಿ ಕಂಗನಾ ಕಣಾವತ್ ಅವರು ಚಂಡಿಗಡದಿಂದ ಮುಂಬೈಗೆ ಇಂಡಿಗೋ ವಿಮಾನದಲ್ಲಿ ನಿಮಯ ಉಲ್ಲಂಘಿಸಿದ ಆರೋಪದ ಮೇಲೆ ಈ ಕ್ರಮ ಕೈಗೊಳಗಳಲಾಗಿದೆ.


ಕಂಗನಾ ವಿಮಾನದಲ್ಲಿ ಬರುವ ವೇಳೆ ವಿಮಾನದಲ್ಲಿ ಮಾದ್ಯಮಗಳು ಚಿತ್ರೀಕರಣ ಮಾಡಿದ್ದವು. ಇದು ನಿಯಮ ಉಲ್ಲಂಘನೆಯಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಯಲ ಇಂಡಿಗೋ ವಿಮಾ ನಯಾ ಸಂಸ್ಥೆಯಿಂದ ವರದಿ ಕೇಳಿತ್ತು.ಇಂಡಿಗೋ ವಿಮಾನ ೬ಇ -೨೬೪ ವಿಮಾನದಲ್ಲಿ ಚಿತ್ರೀಕರಣ ಮಾಡಿದ್ದ ೯ ಪತ್ರಕರ್ತರಿಗೆ ಅಕ್ಟೋಬರ್ ೧೫ ರಿಂದ ೩೦ ರವೆಗೆ ವಿಮಾನಯಾನ ಸಂಚಾರ ಹಾಕಲಾಗಿದೆ.ಅದು ಮುಗಿಯಲು ಇನ್ಜು ಕೆಲವೇ ದಿನಬಾಕಿ ಇದೆ.ವಿಮಾನದಲ್ಲಿ ಅನುಚಿತವಾಗಿ ವರ್ತಿಸಿದ ವಿಮಾಣಿಕರ ವಿರುದ್ಧ ಕ್ರಮ ಕೈಗೊ?ಳುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಇಂಡೊಗೋ ವಿಮಾನಯಾನ ಸಂಸ್ಥೆ ಗೆ ಸೂಚನೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನ ೯ ಪತ್ರಕರ್ತರ ವಿರುದ್ದ. ಹದಿನೈದು ದಿನ ವಿಮಾನ ಸಂಚಾರ ಪ್ರಯಾಣ ನಿಷೇದಿಸಿದೆ.ಮುಂಬೈ ಪಾಕಿಸ್ತಾನದ ಆಕ್ರಮಿತ ಕಾಶ್ಮೀರದಂತೆ ಇದೆ ಎನ್ನುವ ಮೂಲಕ ನಟಿ ಕಂಗನಾ ರಣಾವತ್ ಆರೋಪ ಮಾಡಿದ್ದರು. ಈ ಆರೋಪ ಆಢಳಿತಾರೂಡ ಶಿವಸೇನೆ ನಾಯಕರು ಮತ್ತು ಕಾರ್ಯಕರ್ತ ರನ್ನು ಕೆರಳಿಸಿತ್ತು.
ಈ ಹಿನ್ನೆಲೆಯಲ್ಲಿ ನಟಿ ಕಂಗನಾಗೆ ಕೇಂದ್ರ ಸರ್ಕಾರ ವೈ ಪ್ಲಸ್ ಶ್ರೇಣಿಯ ಭದ್ರತೆ ನೀಡಿತ್ತು.ಈ ಘಟನೆಯ ಬಳಿಕವೂ ಮಹಾರಾಷ್ಟ್ರ ಸರ್ಕಾರ ಮತ್ತು ನಟಿ ಕಂಗನಾ ಅವರ ಮಧ್ಯೆ ಆರೋಪ ಪ್ರತ್ಯಾರೋಪ ಮುಂದುವರಿದಿದೆ.