೯೭ ರ ಬ್ಯಾಚ್ ನಎಂಬಿಬಿಎಸ್ ವಿದ್ಯಾರ್ಥಿಗಳಿಂದಆಕ್ಸಿಜನ್ ಕಾನ್ಸನ್‌ಟ್ರೇಟರ್ ವಿತರಣೆ

ದಾವಣಗೆರೆ.ಮೇ‌.೨೭; ಕೋವಿಡ್ ಮಹಾಮಾರಿಯ ಈ ಸಂಕಷ್ಟದ ಸಂದರ್ಭದಲ್ಲಿ, ಉಚಿತ ದೂರವಾಣಿ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆಯ ವ್ಯವಸ್ಥೆಯನ್ನು ಈಗಾಗಲೇ ಜಾರಿ ಮಾಡಿ ನಡೆಸುತ್ತಿದೆ. ಇದೀಗ ತೀವ್ರವಾದ ಆಕ್ಸಿಜನ್ ಕೊರತೆಯ ಸನ್ನಿವೇಷದಲ್ಲಿ, ಕೋವಿಡ್ ಇಂಡಿಯಾ ಕ್ಯಾಂಪೇನ್,  ಫೌಂಡೇಷನ್, ಅವಿರತ ಭಾರತ, 97 ಜೆಜೆಎಂಎಂಸಿ ಎಂಬಿಬಿಎಸ್ ಬ್ಯಾಚ್ ಮುಂತಾದ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ  ದಾವಣಗೆರೆಯಲ್ಲಿ ಉಚಿತ ಆಕ್ಸಿಜನ್ ಕಾನ್ಸನ್‌ಟ್ರೇಟರ್ ವಿತರಿಸುವ ಕಾರ್ಯಕ್ರಮ ನಡೆಯಿತು. ಅರ್ಹ ರೋಗಿಗಳಿಗೆ ವೈದ್ಯರ ಶಿಫಾರಸ್ಸಿನ ಮೇರೆಗೆ ಉಚಿತ ಬಳಕೆಗೆಗೆ ಅವಕಾಶವಿದ್ದು, ಬಳಕೆಯ ನಂತರ ಅದನ್ನು ಮರಳಿ ತೆಗೆದುಕೊಂಡು ಮತ್ತೊಬ್ಬ ರೋಗಿಗೆ ನೀಡುವ ವ್ಯವಸ್ಥೆಯನ್ನು ಎಂಎಸ್‌ಸಿ ಮಾಡಿದೆ. ಈ ಸಂದರ್ಭದಲ್ಲಿ ಸೊಸೈಟಿ ಫಾರ್ ಎಮೆರ್ಜೆನ್ಸಿ ಮೆಡಿಸಿನ್ ಕರ್ನಾಟಕ ಅಧ್ಯಕ್ಷಡಾ. ನಾಗ ನಿಶ್ಚಲ್,  ಮಾತನಾಡಿ ಸರಿಯಾದ ವೇಳೆಯಲ್ಲಿ ಆಕ್ಸಿಜನ್ ನೀಡಿದಲ್ಲಿ, ರೋಗವು ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯಬಹುದು. ನಮ್ಮ ಉದ್ದೇಶ, ಆಕ್ಸಿಜನ್ ದೊರೆಯುವ ಸಮಯವನ್ನು ಸಾಧ್ಯವಾದ ಮಟ್ಟಿಗೆ ಕಡಿಮೆ ಮಾಡಿ ಜೀವ ಉಳಿಸುವುದಾಗಿದೆ. ದಾವಣಗೆರೆಯ ಜೆಜೆಎಂಎಂಸಿ ಮೆಡಿಕಲ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿ ಈ ಊರಿಗೆ  ನನ್ನ ಸಣ್ಣ ಕೊಡುಗೆ ನೀಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದರು.ಅವಿರತ ಭಾರತದ ಅಧ್ಯಕ್ಷರಾದ ಹರ್ಷ ಕೃಷ್ನ “ಸ್ಥಳೀಯ ಸಂಘಟನೆಗಳೊಂದಿಗೆ ಕೆಲಸ ಮಾಡುತ್ತಾ ಸರಿಯಾದ ವೇಳೆಯಲ್ಲಿ ಸಹಾಯ ನೀಡುವ ಪ್ರಯತ್ನ ಇದಾಗಿದೆ. ಎಲ್ಲಾ ಸಂಘಟಕರಿಗೂ ಧನ್ಯವಾದಗಳು”ಮೆಡಿಕಲ್ ಸರ್ವಿಸ್ ಸೆಂಟರ್ ರಾಜ್ಯ ಕಾರ್ಯದರ್ಶಿ ಡಾ. ವಸುಧೇಂದ್ರ “ಇಂದಿನ ದುರಿತ ಸಂದರ್ಭದಲ್ಲಿ ವೈದ್ಯರು, ಸೇವಾ ಸಂಘಟನೆಗಳು, ಜನ ಸಾಮಾನ್ಯರು ಕೈಜೋಡಿಸುತ್ತಾ ಒಬ್ಬರಿಗಿಬ್ಬರು ಸಹಾಯ ಮಾಡಬೇಕಾಗಿದೆ. ಜೀವ ಉಳಿಸುವ ಕಾರ್ಯ ನಡೆಯುತ್ತಿದೆ. ಇದರ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ವೈದ್ಯರಾದ ಡಾ. ರೇಣುಕಾ ಬಿ ಜಿ, ಡಾ. ಚಂದರಶೇಖರ್, ಎಂಎಸ್‌ಸಿ ಸಂಘಟನೆಯ ಡಾ. ಚಂದನ್, ಡಾ ನಿಖಿಲ್, ಯತೀಂದ್ರ, ವಿನಯ್, ಸುರೇಶ್ ಮುಂತಾದ ಸಂಘಟಕರು ಹಾಜರಿದ್ದರು.